ಜಾಗತಿಕ ಮಟ್ಟದ ಕನ್ನಡ ಪ್ರತಿಭೆ ಭೈರಪ್ಪ

Team Udayavani, Jan 20, 2019, 7:27 AM IST

m3-jagatika.jpg

ಮೈಸೂರು: ಕನ್ನಡ ಪ್ರಸಿದ್ಧ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅವರ ಬರಹದಲ್ಲಿ ವ್ಯಾಪಕ ಅಧ್ಯಯನ, ಆಳವಾದ ಸಂಶೋಧನೆ, ಗಹನವಾದ ಚಿಂತನೆ, ಪೂರ್ವಗ್ರಹರಹಿತ ಗ್ರಹಿಕೆ, ಐತಿಹಾಸಿಕ ಪರಿಪೇಕ್ಷ ಎಂಬ ಐದು ಅಂಶಗಳು ಪ್ರಧಾನವಾಗಿವೆ ಎಂದು ಲೇಖಕ, ಭಾಷಾ ಶಾಸ್ತ್ರಜ್ಞ ಡಾ. ಪ್ರಧಾನ ಗುರುದತ್ತ ವಿಶ್ಲೇಷಿಸಿದರು.

ನಗರದ ಕಲಾಮಂದಿರದಲ್ಲಿ ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಎಸ್‌.ಎಲ್‌. ಭೈರಪ್ಪ ಸಾಹಿತ್ಯೋತ್ಸವ-2019 ಕಾರ್ಯಕ್ರಮದಲ್ಲಿ ಭೈರಪ್ಪನವರೊಂದಿಗಿನ ಸಂದರ್ಶನಗಳ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. 

ಚಿಂತನ ಮಂಥನ 16 ಮಂದಿ ಲೇಖಕರು ಭೈರಪ್ಪನವರನ್ನು ಸಂದರ್ಶನ ಮಾಡಿರುವ ಕೃತಿ. 16 ಜನ ಲೇಖಕರು ಎತ್ತಿರುವ ಪ್ರಶ್ನೆಗಳಿಗೆ ಭೈರಪ್ಪನವರು ಕೊಟ್ಟಿರುವ ಉತ್ತರ, ಜಾಗತಿಕ ಮಟ್ಟದ ಕನ್ನಡ ಪ್ರತಿಭೆಯನ್ನು ಎತ್ತಿ ತೋರುತ್ತದೆ. ಚಿಂತನ-ಮಂಥನ ಕೃತಿಯಲ್ಲಿ ಕೆಲವೊಂದು ಪ್ರಶ್ನೆಗಳು ಅರ್ಧಪುಟಕ್ಕೆ ವಿಸ್ತರಿಸಿದೆ. ಇದಕ್ಕೆ ಭೈರಪ್ಪನವರು ನೀಡಿರುವ ಉತ್ತರ ಎರಡು ಮೂರು ಪುಟಗಳಷ್ಟಿದೆ.

ಎಲ್ಲಾ ಪ್ರಶ್ನೆಗಳಿಗೂ ಇತಿಹಾಸದ ಹಿನ್ನೆಲೆಯ ಮೂಲಕವೇ ಭೈರಪ್ಪನವರು ಉತ್ತರಿಸಿದ್ದಾರೆ. ಇದು ಅವರ ಅಧ್ಯಯನದ ವಿಸ್ತಾರತೆಯನ್ನು ಹೇಳುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭೈರಪ್ಪನವರ ಕಾದಂಬರಿ ಮಲಯಾಳಂ ಭಾಷೆಗೆ ಭಾಷಾಂತರವಾಗಿರಲಿಲ್ಲ. ಕರ್ನಾಟಕದ ಕೆಲವು ಬುದ್ಧಿಜೀವಿಗಳು ಭೈರಪ್ಪನವರು ಬಲಪಂಥೀಯ, ಹಿಂದುತ್ವವಾದಿ ಎಂದು ಹೇಳಿ, ಭೈರಪ್ಪನವರ ಕೃತಿ ಮಲಯಾಳಂಗೆ ತಲುಪದಂತೆ ಮಾಡಿದ್ದರು.

ಅವರ ಪರ್ವ ಆವರಣ ಮಲಯಾಳಂಗೆ ಅನುವಾದಗೊಂಡ ಮೇಲೆ ವಾತಾವರಣ ಬದಲಾಗಿದೆ. ಜನಾಂಗದ ಕಣ್ಣು ತೆರೆಸುವ ಸಾಹಿತಿ ಭೈರಪ್ಪ. ಭೈರಪ್ಪನವರು ಅನೇಕ ಪ್ರಶಸ್ತಿಗಳನ್ನು ನಿರಾಕರಿಸಿದ್ದಾರೆ.  ತರುಣ ಲೇಖಕರಿಗೆ ಆ ಪ್ರಶಸ್ತಿ ದೊರಕಲಿ ಎಂಬ ಉದ್ದೇಶದಿಂದ ಹಾಗೆ ಮಾಡಿದರು ಎಂದು ಹೇಳಿದರು. 

ಭೈರಪ್ಪ ಅವರ ಸಮಕಾಲೀನ ಚಿಂತನೆಗಳನ್ನು ಚಿಂತನ ಮಂಥನ ವ್ಯಕ್ತಪಡಿಸುತ್ತದೆ. ಅಹಿಂಸೆ ಮತ್ತು ಸತ್ಯಗಳಷ್ಟೇ ಅಲ್ಲದೇ ಕ್ಷಾತ್ರ ಗುಣವೂ ಬೇಕು ಎನ್ನುತ್ತಾರೆ ಭೈರಪ್ಪ. ಭೈರಪ್ಪನವರು ಉತ್ತರ ಕಾಂಡ ಬರೆದಾಗ ಕೆಲವು ಸಂಪ್ರದಾಯವಾದಿಗಳೇ ಅಸಂತೋಷಗೊಂಡಿದ್ದರು. ಭೈರಪ್ಪನವರು ಯಾವುದನ್ನೂ ಮುಚ್ಚಿಡದೇ ಬರೆವ ಸಾಹಿತಿ. ರಾಮನನ್ನೂ ವಿಮರ್ಶೆಗೆ ಒಳಪಡಿಸಿದ್ದು ಸಂಪ್ರದಾಯವಾದಿಗಳಿಗೆ ಬೇಸರ ತರಿಸಿತ್ತು. ಹೀಗಿರುವಾಗ ಭೈರಪ್ಪನವರು ಒಂದು ಪಂಥಕ್ಕೆ ಸೇರಿದವರು ಎಂಬ ಟೀಕೆಗಳು ಸರಿಯಲ್ಲ ಎಂದರು.

ಭೈರಪ್ಪನವರು ಹಿಂದುತ್ವವಾದಿ ಎಂದು ಹೇಳುವವರು, ಪ್ಲೇಟೋನನ್ನು ಸರಿಯಾಗಿ ಓದಿಕೊಂಡಿಲ್ಲ. ಓದಿಕೊಂಡಿದ್ದರೂ ಅರ್ಥ ಮಾಡಿಕೊಂಡಿಲ್ಲ. ತಪ್ತಾಗಿ ಅರ್ಥೈಸಿದ್ದಾರೆ. ಅವರು ಬ್ರಿಟಿಷ್‌ ಸಾಹಿತಿಗಳಂತೆ ನಕಾರಾತ್ಮಕವಾಗಿ ಚಿಂತಿಸುತ್ತಾರೆ. ಅವರ ಅವಿವೇಕಕ್ಕೆ ಏನು ಹೇಳಬೇಕು? ಎಂದು ಭೈರಪ್ಪನವರು ಪ್ರಶ್ನಿಸುತ್ತಾರೆ. ಇಂಥವರಿಗೆ ಭೈರಪ್ಪನವರು ಉತ್ತರ ಕೊಡಲು ಹೋಗಿಲ್ಲ. ಉತ್ತರ ಕೊಡಲು ಹೋಗಿದ್ದರೆ ನನ್ನ ಬರವಣಿಗೆಯ ಸತ್ವ ಹೋಗುತ್ತಿತ್ತು . ಆದ್ದರಿಂದ ಸಂಪೂರ್ಣವಾಗಿ ಅಲಕ್ಷಿಸಿದೆ ಎಂದು ಭೈರಪ್ಪನವರು ತಿಳಿಸಿದ್ದಾರೆ ಎಂದು ವಿವರಿಸಿದರು.

16 ಮಂದಿ ಲೇಖಕರು ಭೈರಪ್ಪನವರನ್ನು ಸಂದರ್ಶಿಸಿರುವ  ಚಿಂತನ ಮಂಥನ ಕೃತಿಯನ್ನು ಡಾ. ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ, ಶತಾವಧಾನಿ ಗಣೇಶ್‌, ಲೇಖಕಿ ಶೆಫಾಲಿ ವೈದ್ಯ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಉಪಸ್ಥಿತರಿದ್ದರು.

ಅವರಣ ಬರೆಯಲು 132 ಕೃತಿ ಅಧ್ಯಯನ: ಅಖೀಲ ಭಾರತೀಯ ಸ್ತರದ ಏಕೈಕ ಸಾಹಿತಿ ಡಾ. ಭೈರಪ್ಪ ಎಂದು ಲೇಖಕ ಎಸ್‌. ರಾಮಸ್ವಾಮಿ ಹೇಳಿದ್ದಾರೆ. ಅವರ ಆವರಣ, ಸಾರ್ತ ಕಾದಂಬರಿಗಳನ್ನು ಹಿಂದಿಗೆ ಭಾಷಾಂತರ ಮಾಡುವ ಭಾಗ್ಯ ನನಗೆ ದೊರೆತಿದೆ. ಭೈರಪ್ಪನವರು 132 ಕೃತಿಗಳನ್ನು ಅಧ್ಯಯನ ಮಾಡಿ ಆವರಣ ಕೃತಿ ಬರೆದರು. ಅನೇಕ ಭಾರತೀಯ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡವು.

ಅವರ ಆವರಣ ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಬೇರೆ ಭಾಷೆಯವರು ಈ ಕೃತಿಯ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅದರೆ, ಕರ್ನಾಟಕ ವಿಚ್ಛಿದ್ರ ಶಕ್ತಿಗಳು ಭೈರಪ್ಪನವರ ಆವರಣ ಕೃತಿಗೆ ಟೀಕೆ ವ್ಯಕ್ತಪಡಿಸಿದರು ಎಂದು ಗುರುದತ್ತ ವಿಷಾದಿಸಿದರು. ಭೈರಪ್ಪನವರು ಬರೆದಿರುವ ಕಾದಂಬರಿಗಳಲ್ಲಿ ಒಂದರಲ್ಲಿ ಬಂದ ವಿಷಯ ಇನ್ನೊಂದರಲ್ಲಿ ಪುನರಾವರ್ತನೆಯಾಗಿಲ್ಲ. ಒಂದೊಂದು ಕಾದಂಬರಿಯೂ ಒಂದೊಂದು ವೈಶಿಷ್ಟéತೆ ಹೊಂದಿದೆ ಎಂದರು.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.