2ನೇ ದಿನ ಜ್ಯೋತಿರ್ಲಿಂಗ ದರ್ಶನಕ್ಕೆ ಜನಜಾತ್ರೆ

Team Udayavani, Feb 19, 2019, 7:40 AM IST

m2-2nedina.jpg

ತಿ.ನರಸೀಪುರ: ಕಾವೇರಿ, ಕಪಿಲೆ ಹಾಗೂ ಸ್ಫಟಿಕ ಸರೋವರದ ತ್ರಿವೇಣಿ ಸಂಘದಲ್ಲಿ ನಡೆಯುತ್ತಿರುವ 11ನೇ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಭಕ್ತರು ಪವಿತ್ರ ಸ್ನಾನದ ಜತೆಗೆ ದೇಶದ 12 ಜ್ಯೋತಿರ್ಲಿಂಗದ ದರ್ಶನ ಒಂದೇ ಕಡೆಯಲ್ಲಿ ಪಡೆಯಬಹುದಾಗಿದೆ.

ಅಗಸೆöàಶ್ವರದ ದೇವಸ್ಥಾನದ ಭಾಗದಿಂದ ತ್ರಿವೇಣಿ ಸಂಗಮಕ್ಕೆ ಬರುವ ದಾರಿಯಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವತಿಯಿಂದ ತಿರುಮಕೂಡಲದಲ್ಲಿ ಬೃಹತ್‌ ಶಿವಲಿಂಗದ ಜತೆಗೆ ದೇಶದ ನಾನಾ ಭಾಗದಲ್ಲಿರುವ 12 ಜ್ಯೋತಿರ್ಲಿಂಗಳ ಪ್ರತಿಕೃತಿ ಸ್ಥಾಪಿಸಲಾಗಿದೆ.

ಪ್ರತಿಯೊಂದು ಲಿಂಗಕ್ಕೂ ಹೂವಿನ ಅಲಂಕಾರ: ಗುಜರಾತಿನ ಸೋಮನಾಥ, ಆಂಧ್ರದ ಶ್ರೀಶೈಲ, ಮಧ್ಯಪ್ರದೇಶದ ಮಹಾಕಾಳೇಶ್ವರ, ಮಧ್ಯಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಓಂಕಾರೇಶ್ವರ, ಬಿಹಾರದ ವೈದ್ಯನಾಥ, ಮಹಾರಾಷ್ಟ್ರದ ಪುಣೆಯಲ್ಲಿರುವ ಭೀಮಾಶಂಕರ, ತಮಿಳುನಾಡಿನ ರಾಮೇಶ್ವರ, ಗುಜರಾತಿನ ಸೌರಾಷ್ಟ್ರದ ನಾಗೇಶ್ವರ,

ಉತ್ತರ ಪ್ರದೇಶದ ಕಾಶಿವಿಶ್ವನಾಥ, ನಾಸಿಕ್‌ನ ಬ್ರಹ್ಮಗಿರಿ ಬೆಟ್ಟದಲ್ಲಿರುವ ತ್ರಯಂಬಕೇಶ್ವರ, ಉತ್ತರಾಂಚಲದ ಕೇದಾರನಾಥ, ಮಹಾರಾಷ್ಟ್ರದ ಗ್ರಿಶನೇಶ್ವರದಲ್ಲಿ ವಿಶ್ವರ ಲಿಂಗಗಳು ಯಾವ ರೀತಿ ಪ್ರತಿಷ್ಠಾಪಿಸಲ್ಪಟ್ಟಿದೆಯೋ ಅದೇ ಮಾದರಿಯಲ್ಲಿ ಇಲ್ಲಿಯೂ ಆ ಲಿಂಗಗಳ ಮರುಸೃಷ್ಟಿಸಲಾಗಿದೆ. ಪ್ರತಿಯೊಂದು ಲಿಂಗಕ್ಕೂ ಹೂವಿನ ಅಲಂಕಾರದ ಜತೆಗೆ, ಹಿನ್ನೆಲೆಯನ್ನು ಅಲ್ಲೇ ವಿವರಿಸಲಾಗಿದೆ. 

ನೀರವ ಮೌನ: ಜ್ಯೋತಿರ್ಲಿಂಗದ ದರ್ಶನದ ಒಳ ಪ್ರವೇಶ ಮಾಡುತ್ತಿದ್ದಂತೆ ನಂದಿಯ ಎದುರಿರುವ ದೊಡ್ಡ ಶಿವಲಿಂಗ ಗೋಚರವಾಗುತ್ತದೆ. ಒಳಗೆ ನೀರವ ಮೌನ, ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಸೋಮನಾಥ, ಮಹಾಕಾಳೇಶದವರ, ಶ್ರೀಶೈಲದ ಮಲ್ಲಿಕಾರ್ಜುನ ಹೀಗೆ ಒಂದೊಂದೆ ಶಿವಲಿಂಗದ ದರ್ಶನವಾಗುತ್ತದೆ.  

12 ಲಿಂಗಗಳ ಬಗ್ಗೆ ಮಾಹಿತಿ: ದೇಶದ 12 ಕಡೆಗಳಲ್ಲಿ ಶಿವಲಿಂಗದ ದರ್ಶನವನ್ನು ಕುಂಭ ಮೇಳಕ್ಕೆ ಬರುವ ಭಕ್ತರಿಗಾಗಿ ಒಂದೆ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ದೇಶದ 12 ಸ್ಥಳಗಳಿಗೆ ಹೋಗಿ ಜ್ಯೋತಿರ್ಲಿಂಗದ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ.

ಎಲ್ಲೆಲ್ಲಿ ಯಾವ ರೀತಿಯ ಶಿವಲಿಂಗ ಇದೆ ಎಂಬ ಕನಿಷ್ಠ ಮಾಹಿತಿಯಾದರೂ ಇದರಿಂದ ಜನ ಸಾಮಾನ್ಯರಿಗೆ ಹಾಗೂ ಕುಂಭಮೇಳಕ್ಕೆ ಬಂದಿರುವ ಭಕ್ತರಿಗೆ ದೊರೆಯಲಿದೆ. ಅಲ್ಲದೇ, ಆ ದೇವಾಕಲಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭಕ್ತರಿಗೆ ಇಲ್ಲಿ ನೀಡುತ್ತಿದ್ದೇವೆ ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಬಿಂದು ಮಾಹಿತಿ ನೀಡಿದರು.

ಬೃಹತ್‌ ಶಿವಲಿಂಗ: ಹನ್ನೆರೆಡು ಜ್ಯೋತಿರ್ಲಿಂಗದ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಸುಮಾರು 14 ಅಡಿ ಎತ್ತರದ ಶಿವಲಿಂಗ ಎದುರಿಗೆ ಕಾಣುತ್ತದೆ. ಕಬ್ಬಿಣ ಹಾಗೂ ಫೈಬರ್‌ ಬಳಸಿ ಇದನ್ನು ನಿರ್ಮಿಸಲಾಗಿದೆ. ಶಿವಲಿಂಗಕ್ಕೆ ಸಂಪೂರ್ಣವಾಗಿ ವಿದ್ಯುತ್‌ ದೀಪದ ಅಲಂಕಾರವನ್ನು ಮಾಡಲಾಗಿದೆ.

ರೈತರಿಗೆ ಮಾಹಿತಿ: ಇತ್ತೀಚಿನ ವರ್ಷದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮನಸ್ಸಿನ ಮೇಲಿನ ನಿಯಂತ್ರಣ ಕಡಿಮೆ ಆಗಿರುವುದೇ ಮುಖ್ಯ ಕಾರಣ. ಮನುಷ್ಯ ತನ್ನ ಮನಸ್ಸನ್ನೇ ನಿಯಂತ್ರಿಸಿಕೊಳ್ಳದಷ್ಟು ದುರ್ಬಲನಾಗುತ್ತಿದ್ದಾನೆ. ರೈತರ ಮನಸ್ಸನ್ನು ಸದೃಢಗೊಳಿಸುವ ಉದ್ದೇಶದಿಂದ ಕುಂಭಮೇಳಕ್ಕೆ ಬರುವ ರೈತರಿಗೆ ಅಗತ್ಯ ಮಾಹಿತಿ ಹಾಗೂ ಅವರ ಮನಸ್ಸನ್ನು ಸ್ಥಿರಗೊಳಿಸುವ ಉದ್ದೇಶದಿಂದ ಕೃಷಿಕರ ಸಶಕ್ತಿಕರಣ ಚಿತ್ರಪ್ರದರ್ಶನ ಏರ್ಪಡಿಸಿದ್ದೇವೆ.

ಇಲ್ಲಿ ರೈತರಿಗೆ ಸುಲಭ ಕೃಷಿ ಹಾಗೂ ಮನಸ್ಸಿನ ನಿಯಂತ್ರಣ ಎರಡರ ಬಗ್ಗೆಯೂ ಸಮಗ್ರ ಮಾಹಿತಿ ನೀಡುತ್ತೇವೆ. ರೈತರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡು ಪರಿಹಾರ ಪಡೆದುಕೊಳ್ಳಲು ಅವಕಾಶ ಇದೆ ಎಂದು ಬ್ರಹ್ಮಕುಮಾರಿ ವಿವಿ  ಸಂಚಾಲಕರಲ್ಲಿ ಒಬ್ಬರಾದ ಬಿ.ಕೆ.ಪ್ರಾಣೇಶ್‌ ಮಾಹಿತಿ ನೀಡಿದರು.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.