ಶ್ರೀಕಂಠೇಶ್ವರ ದೊಡ್ಡ ಜಾತ್ರೆಗೆ ನಂಜನಗೂಡು ಸಜ್ಜು

Team Udayavani, Mar 19, 2019, 7:15 AM IST

m5-srikante.jpg

ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪಂಚ ಮಹಾ ರಥೋತ್ಸವಕ್ಕೆ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಒಂದೇ ದಿನ ಐದು ರಥಗಳನ್ನು ಎಳೆಯುವುದರಿಂದ ಇದು ದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದಿದೆ.

ಮಂಗಳವಾರ ಬೆಳಗ್ಗೆ 6.40 ರಿಂದ 7.00 ರೊಳಗೆ ಸಲ್ಲುವ ಶುಭ  ಮೀನ ಲಗ್ನದಲ್ಲಿ ಪಂಚ ಮಹಾರಥೋತ್ಸವ ನಡೆಯಲಿದ್ದು, ದೇವಸ್ಥಾನದ ಸುತ್ತ ಸೇರಿದಂತೆ ರಥಬೀದಿಯುದ್ದಕ್ಕೂ ನೀರು ಸಿಂಪಡಿಸಿ ಐದೂ ರಥಗಳಿಗೆ ಅಲಂಕಾರಿಕ  ಬಂಟಿಂಗ್ಸ್‌ ಕಟ್ಟಿ  ಬಾಳೆ ಕಂಬ, ಮಾವು ಹಸಿರು ತೋರಣಗಳಿಂದ ಸಿಂಗರಿಸಲಾಗಿದೆ.

ಸ್ವಚ್ಛತೆ: ರಥಗಳು  ಸಂಚರಿಸುವ  ರಥಬೀದಿಯುದ್ದಕ್ಕೂ ಶ್ರೀಶಂಕರ ಮಠ, ಶ್ರೀರಾಘವೇಂದ್ರ ಮಠ, ರಾಕ್ಷಸ ಮಂಟಪ, ಶಿವರಾತ್ರಿ ಜಗದ್ಗುರು ವೃತ್ತ ಹಾಗೂ ಎಂಜಿ ರಸ್ತೆಯ ಅಂಗಡಿ ಬೀದಿಯಲ್ಲಿ ಸ್ವಯಂ ಪ್ರೇರಿತರಾಗಿ ವರ್ತಕರು, ಬೀದಿಬದಿ ವ್ಯಾಪಾರಿಗಳು ರಥ ಬೀದಿಯನ್ನು ಸ್ವಚ್ಛಗೊಳಿಸಿದರು. ಇದೇ ಸಂದರ್ಭದಲ್ಲಿ ನಗರಸಭೆ ಪೌರಕಾರ್ಮಿಕರು ರಸ್ತೆಯಲ್ಲಿ ಮರಳು ಹರಡಿ ಕೆಮ್ಮಣ್ಣಿನಿಂದ ರಥ ಎಳೆಯುವ ಮಾರ್ಗದ ಗಡಿ ಗುರುತಿಸಿದರು.

ಅರವಟ್ಟಿಗೆ: ಜಿಲ್ಲಾಧಿಕಾರಿ ಆದೇಶದಂತೆ ಸಂಘ-ಸಂಸ್ಥೆಗಳು ಪ್ರಸಾದ ಹಂಚಲು, ಕಾನೂನು ಬದ್ಧವಾಗಿ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಂಡು ಅರವಟ್ಟಿಗೆಗೆ ಸಿದ್ಧತೆ ನಡೆಸಿವೆ. ಸ್ನಾನ ಘಟ್ಟದಲ್ಲಿ ಸ್ವಚ್ಛತೆಗಾಗಿ ಬೋರ್ಡ್‌ಗಳನ್ನು ಹಾಕಿ, ತ್ಯಾಜ್ಯರಹಿತ ಸ್ನಾನಘಟ್ಟವನ್ನಾಗಿಸಲು ದೇವಾಲಯದ ಅಧಿಕಾರಿಗಳಾದ ಕುಮಾರಸ್ವಾಮಿ ಹಾಗೂ ಗಂಗಯ್ಯ ಕ್ರಮ ಕೈಗೊಂಡಿದ್ದಾರೆ.

ದೇಗುಲದ ಸುತ್ತ, ಕಪಿಲಾ ನದಿ ಆಸು-ಪಾಸು, ಮುಂತಾದ ಕಡೆ ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳ ತಡೆಗಾಗಿ ಬ್ಲೀಚಿಂಗ್‌ ಪೌಡ‌ರ್‌ ಹಾಕಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದಾರೆ.

2 ಲಕ್ಷ ಭಕ್ತರು ಭಾಗಿ: ಸೋಮವಾರ ಸಂಜೆಯೇ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಭಕ್ತರು ಆಗಮಿಸಿದ್ದು, ಜನಸಾಗರವೇ ಬೀಡು ಬಿಟ್ಟಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ.

ದೇವಸ್ಥಾನದ ವತಿಯಿಂದ ಶುದ್ಧ ಕುಡಿಯುವ ನೀರು, ಶೌಚಾಲಯ, ತಾತ್ಕಾಲಿಕ ಆಸ್ಪತ್ರೆ, ಅರಕ್ಷಕ ಠಾಣೆ, ಆ್ಯಂಬ್ಯುಲೆನ್ಸ್‌ ವಾಹನ, ಅಗ್ನಿಶಾಮಕ ದಳಗಳನ್ನು ಸಿದ್ಧಪಡಿಸಲಾಗಿದೆ. ದಾಸೋಹ ಭವನದಲ್ಲಿ ಸಂಜೆಯ ಪ್ರಸಾದ  ವಿನಿಯೋಗಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. 

ಲಕ್ಷ ಲಡ್ಡು ತಯಾರು: ಇಲ್ಲಿನ ಭಾರತೀ ತೀರ್ಥ ಶಂಕರ ಮಠದಲ್ಲಿ ಬೆಂಗಳೂರಿನ ಶ್ರೀಕಂಠೇಶ್ವರ ಸ್ವಾಮಿ ಸೇವಾ  ಸಂಸ್ಥೆಯು ಭಕ್ತರಿಗಾಗಿ ಲಡ್ಡು ತಯಾರಿಸುತ್ತಿದೆ. ಸುಮಾರು ಒಂದು ಲಕ್ಷ ಭಕ್ತರಿಗೆ ಲಡ್ಡು ವಿತರಿಸಲಾಗುವುದು.

ಉಪಾಹಾರ ವ್ಯವಸ್ಥೆ: ನಂಜನಗೂಡಿನ ಸೇವಾ ಬಳಗದಿಂದ ಸಂಜೆ ಫ‌ಲಹಾರ ಭೋಜನ  ಏರ್ಪಡಿಸಿದ್ದರೆ, ದೊಡ್ಡಬಳ್ಳಾಪುರದ ಶ್ರೀಕಂಠಪ್ಪನ ಭಕ್ತರು ಸುಮಾರು ಹತ್ತು ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ. ಅರಮನೆ ಮಾಳದಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ರಥೋತ್ಸವದ ಪ್ರಯುಕ್ತ ಪ್ರಸಾದ, ನೀರು, ಮಜ್ಜಿಗೆ, ಪಾನಕ, ಹಣ್ಣು ವಿತರಣೆಗೆ ತಯಾರಿ ನಡೆಸಿವೆ.

ಮಂಗಳವಾರ ಬೆಳಗ್ಗೆ 6.40ರಿಂದ 7 ಗಂಟೆಯ ಒಳಗೆ ರಥೋತ್ಸವಕ್ಕೆ ಜಿಲ್ಲಾಧಿಕಾರಿ ಅಭಿರಾಂ ಶಂಕರ್‌ ಚಾಲನೆ ನೀಡಲಿದ್ದಾರೆ. ರಥಗಳ ಚಕ್ರಕ್ಕೆ ಗೊದುಮ ನೀಡುವ ಯುವಪಡೆಗೆ ದೇವಸ್ಥಾನದ ವತಿಯಿಂದಲೇ ಟೀ-ಶರ್ಟ್‌ ನೀಡಲಾಗುವುದು ದೇಗುಲದ ಇಒ ಕುಮಾರಸ್ವಾಮಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಮನೆಯಿಂದ ಹೊರಗೆ ನಾನೂ ಸಾಮಾನ್ಯನೇ: ಯದುವೀರ್‌

ಅರಮನೆಯಿಂದ ಹೊರಗೆ ನಾನೂ ಸಾಮಾನ್ಯನೇ: ಯದುವೀರ್‌

1-asasa

Hunsur:ಆಡಳಿತ ಸೌಧದ ಸೀಲಿಂಗ್ ಕಳಚಿಬಿದ್ದು ಮಹಿಳೆ ಕಾಲ್ಬೆರಳು ತುಂಡು!

1-adasdsa

Hunsur: ಸಾಲಬಾಧೆಯಿಂದ ರೈತ ಅತ್ಮಹತ್ಯೆಗೆ ಶರಣು

1-sasd

BJP; ಟಿಕೆಟ್ ಕೊಡುವಾಗ ಕಾರಣ ಹೇಳಬೇಕಾದ ಅಗತ್ಯ ಪಕ್ಷಕ್ಕಿಲ್ಲ: ಪ್ರತಾಪ್ ಸಿಂಹ

Lok Sabha Polls: ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವಿಗೆ ಶ್ರಮ: ಶಾಸಕ ಹರೀಶ್‌ಗೌಡ

Lok Sabha Polls: ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವಿಗೆ ಶ್ರಮ: ಶಾಸಕ ಹರೀಶ್‌ ಗೌಡ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.