CONNECT WITH US  

Digital India: ಅಂಚೆ ಕಚೇರಿಗಳಲ್ಲೂ ಮೊಬೈಲ್ ಫೋನ್ ಮಾರಾಟ ಶುರು!

ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಅಂಚೆ ಕಚೇರಿಗಳಲ್ಲೂ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಲು ಫೋಸ್ಟಲ್ ಡಿಪಾರ್ಟ್ ಮೆಂಟ್ಸ್ ಮುಂದಾಗಿದೆ.

ಮಧ್ಯಪ್ರದೇಶದ ಪೋಸ್ಟಲ್ ಡಿಪಾರ್ಟ್ ಮೆಂಟ್ ರಾಜ್ಯ ಸ್ವಾಮಿತ್ವದ ಬಿಎಸ್ ಎನ್ ಎಲ್ ಮತ್ತು ನೋಯ್ಡಾ ಮೂಲದ ಖಾಸಗಿ ಮೊಬೈಲ್ ಕಂಪನಿ ಜೊತೆ ಕೈಜೋಡಿಸಿದೆ. ಆ ಮೂಲಕ ರಾಜ್ಯದ ಅಂಚೆ ಕಚೇರಿಗಳಲ್ಲಿ ಮೊಬೈಲ್ ಮಾರಾಟ ಮಾಡಲಿದೆ ಎಂದು ತಿಳಿಸಿದೆ.

ಡಿಜಿಟಲ್ ಇಂಡಿಯಾದ ಆರಂಭಿಕ ಹೆಜ್ಜೆ ಎಂಬಂತೆ ಮೊದಲ ಮೊಬೈಲ್ ಫೋನ್ ಹ್ಯಾಂಡ್ ಸೆಟ್ ಅನ್ನು ಮಧ್ಯಪ್ರದೇಶದ ಚೀಫ್ ಫೋಸ್ಟ್ ಮಾಸ್ಟರ್ ಜನರಲ್ ಎಂಇ ಹಖ್ ಅವರು ಗ್ರಾಹಕರೊಬ್ಬರಿಗೆ ಹಸ್ತಾಂತರಿಸುವ ಮೂಲಕ ಪ್ರದಾನ ಅಂಚೆ ಕಚೇರಿಗಳಲ್ಲಿ ಮೊಬೈಲ್ ಫೋನ್ ಮಾರಾಟಕ್ಕೆ ಚಾಲನೆ ನೀಡಿದರು.

ಇಂಡಿಯಾ ಫೋಸ್ಟ್ ಮತ್ತು ಬಿಎಸ್ ಎನ್ ಎಲ್ ಪ್ಯಾನ್ ಟೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪೆಂಟಾ ಭಾರತ್ ಫೋನ್ ಪಿಎಫ್ 301 ಅನ್ನು ಅಂಚೆ ಕಚೇರಿಗಳ ಮೂಲಕ ಮಾರಾಟ ಮಾಡಲಿದೆ. 18 ತಿಂಗಳ ಕಾಲ ಬಿಎಸ್ ಎನ್ ಎಲ್ 1999 ನಿಮಿಷಗಳ ಉಚಿತ ಟಾಕ್ ಟೈಮ್ ನೀಡಲಿದ್ದು, ಈ ಮೊಬೈಲ್ ಬೆಲೆ ಕೂಡಾ 1999 ರೂಪಾಯಿ. ರಾಜ್ಯದ ಎಲ್ಲಾ ಕೇಂದ್ರ ಅಂಚೆ ಕಚೇರಿ ಮತ್ತು ಕೆಲವು ಪ್ರಮುಖ ಅಂಚೆ ಕಚೇರಿಗಳಲ್ಲಿ ಮೊಬೈಲ್ ಹ್ಯಾಂಡ್ ಸೆಟ್ ಮಾರಾಟ ಮಾಡಲಾಗುವುದು ಎಂದು ತಿಳಿಸಿದೆ.


Trending videos

Back to Top