CONNECT WITH US  

ಸಲ್ಮಾನ್ ಅಮಾಯಕ ಓಕೆ; ಹಾಗಾದ್ರೆ ನನ್ನ ತಂದೆನಾ ಕೊಂದವರು ಯಾರು?

ಮುಂಬೈ:ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದ ಸಂದರ್ಭದಲ್ಲಿ ಸಲ್ಮಾನ್ ಆನಂದಬಾಷ್ಪ ಸುರಿಸಿ ಕುಸಿದಿದ್ದನ್ನು ಎಲ್ಲರೂ ಟಿವಿಯಲ್ಲಿ ನೋಡಿದ್ದರು...ಆದರೆ ಮಾಲ್ವಾನಿ ಪ್ರದೇಶದಲ್ಲಿ ಟಿವಿ ನೋಡುತ್ತ ಕುಸಿದು ಬಿದ್ದ ಫಿರೋಜ್ ಶೇಕ್ ನನ್ನು ಯಾರೂ ನೋಡಿಲ್ಲ..ಯಾಕೆಂದರೆ ಅಲ್ಲಿ ಯಾವುದೇ ಕ್ಯಾಮರಾ, ಮೀಡಿಯಾಗಳು ಆ ದೃಶ್ಯವನ್ನು ಸೆರೆಹಿಡಿದಿರಲಿಲ್ಲವಾಗಿತ್ತು!

2002ರ ಸೆಪ್ಟೆಂಬರ್ ನಲ್ಲಿ ಸಲ್ಮಾನ್ ಖಾನ್ ಕಾರಿನಡಿ ಸಿಲುಕಿ ಸಾವನ್ನಪ್ಪಿದ್ದ ನೂರುಲ್ಲಾ ಖಾನ್ ಪುತ್ರನೇ ಈ ಫಿರೋಜ್ ಖಾನ್. ಹೌದು ಬರೋಬ್ಬರಿ 13 ವರ್ಷಗಳ ಕಾಲ ನಿದ್ರೆಗೆಡಿಸಿದ್ದ ಹಿಂಡ್ ಅಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿರುವುದಕ್ಕೆ ನೀಡಿರುವ ತೀರ್ಪಿಗೆ ಫಿರೋಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

13 ವರ್ಷಗಳ ಕಾಲ ತನಿಖೆ ನಡೆಸಿ, ಕೋರ್ಟ್ ವಿಚಾರಣೆ ನಡೆಸಿದರೂ ಕೂಡಾ ಫಿರೋಜ್ ತಂದೆಯನ್ನು ಕೊಂದವರು ಯಾರು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸಲ್ಮಾನ್ ಖಾನ್ ಅಮಾಯಕನಾಗಿದ್ದೇ ಹೌದಾದರೆ, ನನ್ನ ತಂದೆಯನ್ನು ಕೊಂದವರು ಯಾರು ಎಂದು ಫಿರೋಜ್ ಗಂಭೀರವಾದ ಪ್ರಶ್ನೆಯನ್ನು ಕೇಳಿದ್ದಾರೆ.

ನಾನು ಕೂಡಾ ಸಲ್ಮಾನ್ ಖಾನ್ ದೊಡ್ಡ ಅಭಿಮಾನಿ, ನಟ ಖಾನ್ ಅವರನ್ನು ಖುಲಾಸೆಗೊಳಿಸಿರುವುದಕ್ಕೆ ನನ್ನ ಯಾವುದೇ ತಕರಾರಿಲ್ಲ. ಆದರೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅಮಾಯಕನಾದರೆ, ನನ್ನ ತಂದೆಯನ್ನು ಕೊಂದವರು ಯಾರು ಎಂಬುದು ತನಗೆ ತಿಳಿಯಬೇಕು ಎಂದು ಫಿರೋಜ್ ಶೇಕ್ ಮಾಧ್ಯಮದ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.


Trending videos

Back to Top