CONNECT WITH US  

ಟೆರರ್ ಅಟ್ಯಾಕ್; ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಯೋಧರು

ಪಠಾಣ್‌ಕೋಟ್‌ : ಇಲ್ಲಿನ ವಾಯು ನೆಲೆಯ ಮೇಲೆ ಉಗ್ರರು ಶನಿವಾರ ದಾಳಿ ನಡೆಸಿದ್ದು ಮೂವರು  ಭಾರತೀಯ ವಾಯುಪಡೆಯ ಸೈನಿಕರು ಹುತಾತ್ಮರಾಗಿದ್ದಾರೆ. ಸೇನಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. 

ಉಗ್ರ ದಾಳಿ ನಡೆದ ಬಳಿಕ ಎನ್‌ಎಸ್‌ಜಿ ಕಮಾಂಡೋ ಗಳು ಕಾರ್ಯಾಚರಣೆಗಿಳಿದು ಗುಂಡಿನ ಚಕಮಕಿಯಲ್ಲಿ ನಾಲ್ವರು ಶಸ್ತ್ರಧಾರಿ ಉಗ್ರರನ್ನು ಹತ್ಯೆಗೈದಿದ್ದಾರೆ.

ವಾಯುನೆಲೆಯ ಹಿಂಬದಿಯಲ್ಲಿರುವ ಅರಣ್ಯ ಭಾಗದ ಮೂಲಕ ನುಗ್ಗಿದ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಉಗ್ರರಗುಂಡಿಗೆ ಮೂವರು  ವಾಯುಪಡೆಯ ಸೈನಿಕರು ಸಾವನ್ನಪ್ಪಿದ್ದು,6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನೂ ಕೆಲ ಉಗ್ರರು ವಾಯುನೆಲೆಯ  ಬಳಿ ಅಡಗಿರುವ ಶಂಕೆಯ ಹಿನ್ನಲೆಯಲ್ಲಿ ಭಾರೀ ಸಂಖ್ಯೆಯ ಸೈನಿಕರು ವಾಯುನೆಲೆಯನ್ನು ಸುತ್ತುವರಿದು ಉಗ್ರರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ನಿನ್ನೆ ಸಂಜೆ ಪಠಾಣ್‌ ಕೋಟ್‌ನಲ್ಲಿ ಗುರುದಾಸ್‌ಪುರ ಎಸ್‌ಪಿ ಸಲ್ವಿಂದರ್‌ ಸಿಂಗ್‌ ಅವರನ್ನು ಶಸ್ತ್ರಧಾರಿ ಗಳ ಗುಂಪು ಅಪಹರಿಸಿ  ಬಳಿಕ ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದ್ದರು. ಇದೀಗ ದಾಳಿ ನಡೆದಿರುವ ಹಿನ್ನಲೆ ಯಲ್ಲಿ ಅವರನ್ನು ಉಗ್ರರೇ ಅಪಹರಿಸಿದ್ದರು ಎಂದು ಹೇಳಲಾಗಿದೆ.

ಜೈಷ್‌ ಎ ಮೊಹಮದ್‌ ಉಗ್ರರು ದಾಳಿ ನಡೆಸಿರುವುದಾಗಿ ಹೇಳಲಾಗಿದೆ.

ದಾಳಿ ನಡೆದ ಬಳಿಕ ದೆಹಲಿ ಸೇರಿದಂತೆ ದೇಶಾದ್ಯಂತ ವಿಮಾನ ನಿಲ್ದಾಣಗಳು , ಪ್ರಮುಖ ರೈಲು ನಿಲ್ದಾಣಗಳಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. 


Trending videos

Back to Top