CONNECT WITH US  

ಸಾಯೋ ಮುನ್ನ ಊಟ ಮಾಡು ಮಗಾ;ತಾಯಿ ಜೊತೆ ಉಗ್ರನ ಫೋನ್ ಸಂಭಾಷಣೆ!

ಪಠಾಣ್‌ಕೋಟ್‌: ಮಗ ಊರಿಗೆ ಅರಸನೇ ಇರಬಹುದು ಅಥವಾ ಮನುಕುಲಕ್ಕೆ ಕಂಟಕಪ್ರಾಯನಾಗಿರುವ ಭಯೋತ್ಪಾದಕನೇ ಇರಬಹುದು; ಆದರೆ ತಾಯಿಗೆ ಆತ ಕೊನೆಗೂ ತನ್ನ ಕರುಳ ಕುಡಿ; ಅಂತೆಯೇ ಆಕೆ ಸಹಜವಾಗಿ ಮಮತೆ, ವಾತ್ಯಲ್ಯದ ಖಣಿ. "ಸಾಯುವ ಮೊದಲು ಹೊಟ್ಟೆಗೇನಾದ್ರೂ ತಿನ್ನು ಮಗನೇ' ಎಂದು ಆಕೆ ಸಹಜವಾಗಿಯೇ ವಾತ್ಸಲ್ಯದಿಂದ ತನ್ನ ಭಯೋತ್ಪಾದಕ ಪುತ್ರನಿಗೆ ಕೊನೆಯ ಮಾತನ್ನು ಹೇಳಿದ್ದಳು !

ಪಠಾಣ್‌ಕೋಟ್‌ ವಾಯುಪಡೆಯ ನೆಲೆಯ ಮೇಲೆ ಇಂದು ನಸುಕಿನ ವೇಳೆ ದಾಳಿ ನಡೆಸಲು ಬಂದಿದ್ದ ನಾಲ್ವರು ಉಗ್ರರಲ್ಲಿ ಒಬ್ಟಾತ ರಾತ್ರಿ 12.35ರ ಹೊತ್ತಿಗೆ ತನ್ನ ತಾಯಿಗೆ ಇಂಟರ್‌ನೆಟ್‌ ಕರೆ ಮಾಡಿ ಮಾತನಾಡಿಸಿದ್ದ.

ಉಗ್ರ ದಾಳಿ ನಡೆಸಲು ಭಾರತಕ್ಕೆ ಬಂದಿರುವ ತಾನು ಇಲ್ಲಿ ಸೈನಿಕರ ಗುಂಡೇಟು ತಿಂದು ಸಾಯುವುದು ಖಚಿತ ಎಂಬುದನ್ನು ಮೊದಲೇ ಮನಗಂಡಿದ್ದ ಈ ಉಗ್ರನಿಗೆ ಯಾಕೋ ಒಡನೆಯೇ ತನ್ನ ಹೆತ್ತಬ್ಬೆಯ ನೆನಪಾಯಿತು. ಕೂಡಲೇ ಆಕೆಗೆ ಇಂಟರ್‌ನೆಟ್‌ ಕಾಲ್‌ ಮಾಡಿ ಮಾತನಾಡಿಸಿದ. "ಸಾಯುವ ಮೊದಲು ಹೊಟ್ಟೆಗೇನಾದರೂ ತಿನ್ನು; ಬರಿ ಹೊಟ್ಟೆಯಲ್ಲಿ ಸಾಯಬೇಡ' ಎಂದು ಆ ತಾಯಿ ತನ್ನ ಕರುಳ ಕುಡಿಯಾದ ಈ ಉಗ್ರ ಮಗನಿಗೆ ತನ್ನ ಕೊನೆಯ ಮಾತನ್ನು ವಾತ್ಸಲ್ಯದಿಂದ ಹೇಳಿದಳು.

ತಾಯಿ ವಾತ್ಸಲ್ಯದ ಕೊನೆಯ ಮಾತುಗಳನ್ನು ಕೇಳಿಸಿಕೊಂಡ ಉಗ್ರ ತಾನಂದುಕೊಂಡಂತೆಯೇ ಭಾರತೀಯ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ.

ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ದಾಳಿ ಎಸಗಲು ಬಂದಿದ್ದ ನಾಲ್ವರು ಪಾಕ್‌ ಉಗ್ರರು ಮಾಡಿರುವ ಇಂಟರ್‌ನೆಟ್‌ ಕರೆಗಳನ್ನು ಭಾರತೀಯ ಭದ್ರತಾ ಪಡೆಗಳು ಕೇಳಿಸಿಕೊಂಡು ಅವುಗಳನ್ನು ಸಾಕ್ಷ್ಯವನ್ನಾಗಿ ದಾಖಲಿಸಿಕೊಂಡಿರುವುದಾಗಿ ಭದ್ರತಾ ಮೂಲಗಳು ತಿಳಿಸಿವೆ. 

Trending videos

Back to Top