ಚಲಿಸುತ್ತಿದ್ದ ಆಟೋದಿಂದ ಮಗುವನ್ನು ಎಸೆದು ತಾಯಿ ಮೇಲೆ ಗ್ಯಾಂಗ್ ರೇಪ್!
Team Udayavani, Jun 6, 2017, 1:25 PM IST
ಗುರ್ಗಾಂವ್: ಚಲಿಸುತ್ತಿದ್ದ ಆಟೋದೊಳಗಿಂದ 9 ತಿಂಗಳ ಪುಟ್ಟ ಕಂದನನ್ನು ಹೊರಗೆಸೆದ ಕಾಮುಕರು ಮಗುವಿನ ತಾಯಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ದೆಹಲಿ ಸಮೀಪದ ಗುರ್ಗಾಂವ್ ನಲ್ಲಿ ಸೋಮವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಟೋದಿಂದ ಹೊರಗೆಸೆದಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು ಎಂದು ವರದಿ ಹೇಳಿದೆ.
ಘಟನೆ ವಿವರ:
ತನ್ನ ಗಂಡನ ಜೊತೆ ರಂಪಾಟ ಮಾಡಿಕೊಂಡಿದ್ದ 29 ವರ್ಷದ ಸಂತ್ರಸ್ತೆ ಮೇ 29ರಂದು ಮಧ್ಯರಾತ್ರಿ ಪೋಷಕರ ಮನೆಯತ್ತ ಹೊರಟಿದ್ದಳು. ಅದಕ್ಕಾಗಿ ಆಕೆ ಆಟೋ ಹತ್ತಿದ್ದಳು. ಆಟೋದಲ್ಲಿ ಮೊದಲೇ ಮೂವರು ಗಂಡಸರು ಇದ್ದಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಆಟೋದಲ್ಲಿ ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ಮೂವರು ಪ್ಯಾಸೆಂಜರ್ ಆಕೆಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದರು. ಏತನ್ಮಧ್ಯೆ 9 ತಿಂಗಳ ಮಗು ಅಳಲು ಆರಂಭಿಸಿತ್ತು. ಇದರಿಂದ ಸಿಟ್ಟಿಗೆದ್ದ ಕೀಚಕ ಕಾಮುಕರು ಮಗುವನ್ನು ಆಟೋದಿಂದ ಹೊರಗೆಸೆದಿದ್ದರು. ಬಳಿಕ ದೆಹಲಿ ಗುರ್ಗಾಂವ್ ನಿರ್ಜನ ರಸ್ತೆಯಲ್ಲಿ ಆಕೆಯ ಮೇಲೆ ಸಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಕೊಲೆ ಮತ್ತು ಲೈಂಗಿಕ ಕಿರುಕುಳ ಆರೋಪದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿರುವ ಮಹಿಳೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಹರ್ಯಾಣದಲ್ಲಿ ನಡೆದ 3ನೇ ಅತ್ಯಾಚಾರದ ಪ್ರಕರಣ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ