CONNECT WITH US  

ಸ್ಟಾರ್ಟ್‌ ಅಪ್‌ಗಳಿಗೆ ತೆರಿಗೆ ವಿನಾಯಿತಿ

ಸ್ಟಾರ್ಟ್‌ಅಪ್‌ (ಹೊಸ ಕಲ್ಪನೆಯ ಉದ್ಯಮ)ಗಳಿಗೆ ಪ್ರಾಥಮಿಕ ಹಂತದಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅವುಗಳಿಗೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ. ಈ ಯೋಜನೆ ಅನ್ವಯ 2019ರ ಏಪ್ರಿಲ್‌ 1ಕ್ಕೂ ಮುನ್ನ ಆರಂಭಿಸಲಾಗುವ ಸ್ಟಾರ್ಟ್‌ಪ್‌ಗ್ಳಿಗೆ ಲಾಭದ ಮತ್ತು ಗಳಿಕೆ ಮೇಲೆ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು. ಇದಲ್ಲದೇ ಸ್ಟಾರ್ಟ್‌ಪ್‌ ವಾತಾವರಣ ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಸ್ಟಾರ್ಟ್‌ಅಪ್‌ ಇಂಡಿಯಾ ಕಾರ್ಯಯೋಜನೆ ರೂಪಿಸಲಾಗುವುದು. ಇದರಡಿ ಪ್ರತಿ ವರ್ಷ 2500 ಕೋಟಿ ರೂ. ನಂತೆ 4 ವರ್ಷಗಳ ಕಾಲ ನಿಧಿ ಸಂಗ್ರಹಿಸಲಾಗುವುದು. ಇದರ ಮೂಲಕ ಸ್ಟಾರ್ಟ್‌ಪ್‌ಗ್ಳಿಗೆ ಧನಸಹಾಯ ಒದಗಿಸಲಾಗುವುದು. ಇಂಥ ಉದ್ಯಮಗಳಿಗೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ನಿಂದ ವಿನಾಯಿತಿ ನೀಡಲು ಮಾಡಲಾಗುವುದು.

Trending videos

Back to Top