CONNECT WITH US  

ಕಾರ್ಗಿಲ್‌ ಹಿಮಕುಸಿತ: ಕಾಣೆಯಾಗಿದ್ದ ಯೋಧ ಸಾವು

ಶ್ರೀನಗರ: ಜಮ್ಮು-ಕಾಶ್ಮೀರದ ಕಾರ್ಗಿಲ್‌ನಲ್ಲಿ ಸಂಭವಿಸಿದ ಹಿಮ ಕುಸಿತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಯೋಧ ಸಾವನ್ನಪ್ಪಿದ್ದು, ಸೇನಾ ಸಿಬ್ಬಂದಿ ಯೋಧನ ದೇಹವನ್ನು ಭಾನುವಾರ ಹೊರತೆಗೆದಿದ್ದಾರೆ. ಹುತಾತ್ಮ ಯೋಧನನ್ನು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ವಲ್ಲರಾಮಪುರಂ ಗ್ರಾಮದ ವಿಜಯ್‌ ಕುಮಾರ್‌ ಕೆ. ಎಂದು ಗುರುತಿಸಲಾಗಿದೆ. ರಕ್ಷಣಾ ತಂಡ 12 ಅಡಿ ಆಳದಲ್ಲಿದ್ದ ದೇಹವನ್ನು ಹೊರತೆಗೆಯವಲ್ಲಿ ಯಶಸ್ವಿಯಾಗಿದೆ. ಹಿಮ ಕುಸಿತ ಸಂಭವಿಸಿದ ಸ್ಥಳದಲ್ಲಿ 15 ಅಡಿಯಷ್ಟು ಹಿಮ ಮುಚ್ಚಿಕೊಂಡಿತ್ತು. ಮೊದಲ ದಿನವೇ ರಕ್ಷಿಸಲ್ಪಟ್ಟ ಯೋಧ ಸುಜಿತ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

Trending videos

Back to Top