CONNECT WITH US  

ಜಗತ್ತಿನ ಟಾಪ್‌ 7 ಮಲಿನ ನಗರಗಳಲ್ಲಿ ಭಾರತದ್ದೇ 4!

ನವದೆಹಲಿ: ಕೇಂದ್ರ ಸರ್ಕಾರ 'ಸ್ವಚ್ಛ ಭಾರತ'ದ ಬಗ್ಗೆ ನಿರಂತರ ಮಾತನಾಡುತ್ತಿದ್ದರೂ, ವಿಶ್ವದ ಅತಿ ಮಲಿನ, ಟಾಪ್‌ 7 ನಗರಗಳಲ್ಲಿ ಭಾರತದ್ದೇ ನಾಲ್ಕು ನಗರಗಳು ಸ್ಥಾನ ಪಡೆವ ಮೂಲಕ ತಲೆತಗ್ಗಿಸುವಂತೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಬಿಡುಗಡೆಗೊಳಿಸಿದ ಈ ಪಟ್ಟಿಯಲ್ಲಿ ಗ್ವಾಲಿಯರ್‌ (2 ನೇ ಸ್ಥಾನ), ಅಲಹಾಬಾದ್‌ (3 ಸ್ಥಾನ), ಪಟನಾ (6 ನೇ ಸ್ಥಾನ), ರಾಯ್‌ಪುರ್‌ (7 ನೇ ಸ್ಥಾನ) ಪಡೆದಿದೆ. 2008ರಿಂದ 2013ರವರೆಗಿನ ದತ್ತಾಂಶಗಳನ್ನು ಸಂಗ್ರಹಿಸಿ ಈ ಪಟ್ಟಿ ಮಾಡಲಾಗಿದೆ. 2014ರಲ್ಲಿ ಅತಿ ಮಲಿನ ನಗರವಾಗಿ ಹೆಸರಾಗಿದ್ದ ದೆಹಲಿ 11ನೇ ಸ್ಥಾನ ಪಡೆದಿದೆ. 

ಇರಾನ್‌ನ ಜಬೋಲ್‌ ನಂ.1 ಮಲಿನ ನಗರವಾಗಿದೆ. ಇದೇ ವೇಳೆ ಜಗತ್ತಿನಾದ್ಯಂತ ಶೇ.80ರಷ್ಟು ನಗರಗಳಲ್ಲಿ ಉಸಿರಾಡುವ ಗಾಳಿ ಗುಣಮಟ್ಟ ತೀರ ಕಡಿಮೆಯಾಗಿರುವುದಾಗಿ ಡಬ್ಲ್ಯೂಎಚ್‌ಒ ಹೇಳಿದೆ.

Trending videos

Back to Top