CONNECT WITH US  

ಮೌಂಟ್‌ ಎವರೆಸ್ಟ್‌ ಶಿಖರ ಏರಿದ ಭಾರತೀಯ ಸೇನಾ ತಂಡ

ಜಮ್ಮು : ಜಮ್ಮು ಕಾಶ್ಮೀರದ ಲೆ| ಕ| ರಣವೀರ್‌ ಜಮ್‌ವಾಲ್‌ ನೇತೃತ್ವದ ಸೇನೆಯ ಪರ್ವತಾರೋಹಿ ತಂಡ ಇಂದು ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರುವ ಸಾಧನೆಯನ್ನು ಮಾಡಿದೆ.

ಪ್ರತಿಕೂಲ ವಾತಾವಾರಣದಲ್ಲೂ ಭಾರತೀಯ ಸೇನಾ ತಂಡ ಇಂದು ಬೆಳಗ್ಗೆ 6.07ರ ಹೊತ್ತಿಗೆ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿತು ಎಂದು ಉಧಾಂಪುರದಲ್ಲಿನ ಸೇನಾ ವಕ್ತಾರ ಕ| ಎಸ್‌ ಡಿ ಗೋಸ್ವಾಮಿ ತಿಳಿಸಿದ್ದಾರೆ.

ನೇಪಾಲ ಭೂಕಂಪ ದುರಂತದ ಬಳಿಕ ಸುಮಾರು ಎರಡು ವರ್ಷಗಳ ಕಾಲ ನಿಂತೇ ಹೋಗಿದ್ದ 8,848 ಮೀಟರ್‌ ಎತ್ತರದ ಎವರೆಸ್ಟ್‌ ಶಿಖರ ಆರೋಹಣದ ಭಾರತೀಯ ಸೇನಾ ತಂಡದ ಹೊಸ ಸಾಹಸಕ್ಕೆ ಈಚೆಗಷ್ಟೇ ಚಾಲನೆ ನೀಡಲಗಿತ್ತು. 

ಕಳೆದ ವರ್ಷ ಎಪ್ರಿಲ್‌ 25ರಂದು 7.9 ಅಂಕಗಳ ತೀವ್ರತೆಯೊಂದಿಗೆ ನೇಪಾಲ್‌ ಭೂಕಂಪ ಘಟಿಸಿದ್ದಾಗ ಲೆ| ಕ| ಜಮಾÌಲ್‌ ನೇತೃತ್ವದ ಎವರೆಸ್ಟ್‌ ಪರ್ವತಾರೋಹಣ ತಂಡವು ಬೇಸ್‌ ಕ್ಯಾಂಪ್‌ ನಲ್ಲಿ ಸಿಲುಕಿ ಕೊಂಡಿತ್ತು ಎಂದು ಗೋಸ್ವಾಮಿ ಹೇಳಿದ್ದಾರೆ. ಜಮ್‌ವಾಲ್‌ ತಂಡದಲ್ಲಿ ಒಬ್ಬ ಜೂನಿಯರ್‌ ಕಮಿಷನ್‌ಡ್‌ ಆಫೀಸರ್‌ ಮತ್ತು ಇತರ ಐದು ಕ್ರಮಾಂಕಗಳ ಸಿಬಂದಿಗಳು ಇದ್ದರು. 

Trending videos

Back to Top