CONNECT WITH US  

ನೋಡಲು ಚೆನ್ನಾಗಿಲ್ಲವೆಂದು 17 ನಾಯಿಗಳ ಹತ್ಯೆ!

ಕೋಲ್ಕತಾ: ಇಲ್ಲಿನ ಐಷಾರಾಮಿ ವಸತಿ ಸಂಕೀರ್ಣವೊಂದರ ಬಳಿ ಓಡಾಡಿಕೊಂಡಿದ್ದ 17 ಬೀದಿ ನಾಯಿಗಳನ್ನು ಅವು ನೋಡಲು ಚೆನ್ನಾಗಿಲ್ಲ ಮತ್ತು ಸುತ್ತಮುತ್ತ ಪರಿಸರ ವಾತಾವರಣ ಹಾಳುಮಾಡುತ್ತಿವೆ ಎಂಬ ಕಾರಣದಿಂದ ಹತ್ಯೆ ಮಾಡಿರುವ ಹೇಯ ಘಟನೆ ನಡೆದಿದೆ. 

ಇಲ್ಲಿನ ಡೈಮಂಡ್‌ ಸಿಟಿಯ ಸುತ್ತಮುತ್ತ ಹಲವು ಬೀದಿನಾಯಿಗಳು ವಾಸವಿದ್ದವು. ಅವುಗಳನ್ನು ಬೇರೆಡೆ ಸಾಗಿಸುವಂತೆ ಹಲವಾರು ಬಾರಿ ದೂರು ನೀಡಿದ್ದರೂ ಏನೂ ಪ್ರಯೋಜನ ಆಗಿರಲಿಲ್ಲ. ಈ ನಡುವೆ ಕಳೆದ ಕೆಲ ದಿನಗಳಿಂದ ಏಕಾಏಕಿ ಆ ಪ್ರದೇಶದಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗಿತ್ತು. ಈ ಬಗ್ಗೆ ಡೈಮಂಡ್‌ ಸಿಟಿ ಸಮೀಪದಲ್ಲೇ ಇರುವ ಗೋಪಾ ಗಂಗೂಲಿ ಎಂಬುವವರು ರಹಸ್ಯವಾಗಿ ಡೈಮಂಟ್‌ ಸಿಟಿ ಸುತ್ತಮುತ್ತ ನಡೆಯುತ್ತಿರುವ ಕಾರ್ಯಾಚರಣೆಯನ್ನು ಗಮನಿಸಿದಾಗ, ಅಲ್ಲಿ ನಾಯಿ ಹಿಡಿಯುವವರನ್ನು ಬಳಸಿ ನಾಯಿಗಳನ್ನು ಹತ್ಯೆ ಮಾಡಿದ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆಯನ್ನೂ ಮಾಡಲಾಗಿದೆ.

Trending videos

Back to Top