CONNECT WITH US  

ಜೋಧಪುರ ಊರಿನೊಳಗೇ ಮಿಗ್‌ ವಿಮಾನ ಪತನ

ಜೋಧ್‌ಪುರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್‌-27 ಯುದ್ಧ ವಿಮಾನವು ರಾಜಸ್ಥಾನದ ಜೋಧ್‌ಪುರ ಮಹಾನಗರದ ಜನವಸತಿ ಪ್ರದೇಶದಲ್ಲೇ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಪತನಗೊಡಿದೆ. ವಿಮಾನ ಪತನವಾಗುತ್ತಿದ್ದಂತೆಯೇ ಪೈಲಟ್‌ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಹಾರಿದ್ದಾನೆ. ಅಲ್ಲದೆ, ಜನವಸತಿ ಪ್ರದೇಶದಲ್ಲೂ ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ.

ಜೋಧ್‌ಪುರದ ಮಹಾವೀರ ನಗರ ಪ್ರದೇಶದಲ್ಲಿ ಮನೆಯೊಂದರ ಪಕ್ಕದಲ್ಲೇ ಮಿಗ್‌-27 ಸಮರ ವಿಮಾನ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿತ್ಯದ ತರಬೇತಿ ಹಾರಾಟದಲ್ಲಿ ನಿರತವಾಗಿದ್ದ ಮಿಗ್‌-27 ಸಮರ ವಿಮಾನದ ಪೈಲಟ್‌, ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವುದಾಗಿ ನಿಯಂತ್ರಣ ಕೊಠಡಿಗೆ ತಿಳಿಸಿದ್ದ ಮತ್ತು ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಕೋರಿದ್ದ. ಆದರೆ ಆ ಬಳಿಕ ಕೂಡಲೇ ವಿಮಾನದ ಇಂಜಿನ್‌ ವಿಫ‌ಲವಾದ ಕಾರಣ ಆತ ವಿಮಾನದಿಂದ ಹೊರ ಹಾರಿ ಸುರಕ್ಷಿತವಾಗಿ ಪಾರಾದ ಎಂದು ವಾಯುಪಡೆ ಮೂಲಗಳು ಹೇಳಿವೆ. ವಿಮಾನ ಪತನದಿಂದಾಗಿ ಮನೆಯೊಂದಕ್ಕೆ ಭಾಗಶಃ ಹಾನಿಯುಂಟಾಗಿದೆ. ಇದರ ಸಮೀಪದ ಇತರ ಮನೆಗಳ ಗೋಡೆಗಳಲ್ಲಿ ಬಿರುಕು ಉಂಟಾಗಿವೆ. ಪತನದ ಕಾರಣಗಳನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.


Trending videos

Back to Top