CONNECT WITH US  

ಈರುಳ್ಳಿ, ಟೊಮೆಟೋ, ಆಲೂ, ಮೆಣಸು ಭಾರತದ್ದಲ್ಲ!

ನವದೆಹಲಿ: ಈರುಳ್ಳಿ, ಟೊಮೆಟೋ, ಆಲೂ ಗಡ್ಡೆ, ಮೆಣಸಿನಕಾಯಿ, ಸಾಸಿವೆ ಇಲ್ಲದ ಭಾರತೀಯರ ಅಡುಗೆಮನೆ ಕಲ್ಪಿಸಿಕೊಳ್ಳು ವುದು ಕಷ್ಟ. ಆದರೆ ಈ ಎಲ್ಲ ಪದಾರ್ಥಗಳು ಭಾರತೀಯ ಮೂಲದವೇ ಅಲ್ಲ!

ಹೌದು. ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಅಧ್ಯಯನ ನಡೆಸಿ, ವಿಶ್ವದಲ್ಲಿ ಬಳಕೆಯಾಗುತ್ತಿರುವ ಹಣ್ಣು, ತರಕಾರಿ, ಆಹಾರ ಧಾನ್ಯಗಳ ಮೂಲ ಪತ್ತೆ ಹಚ್ಚಿದೆ. ಆ ಪೈಕಿ ಭಾರತದಲ್ಲಿ ಬಳಕೆಯಾಗುತ್ತಿರುವ ಆಹಾರ ಪದಾರ್ಥಗಳ ಪೈಕಿ ಮೂರನೇ ಒಂದರಷ್ಟು ಸಾಮಗ್ರಿಗಳು ವಿದೇಶಿ ಮೂಲದ್ದಾಗಿವೆ. 

ಮಾನವರ ವಲಸೆ, ವ್ಯಾಪಾರದಿಂದಾಗಿ ಹಣ್ಣು, ತರಕಾರಿ ಹಾಗೂ ಆಹಾರಧಾನ್ಯಗಳು ಗಡಿ ದಾಟಿ ವಿವಿಧ ದೇಶಗಳಿಗೆ ಹೋಗಿವೆ. ಅಂತೆಯೇ ಭಾರತಕ್ಕೂ ಬಂದಿವೆ ಎಂಬುದು ವಿಜ್ಞಾನಿಗಳ ವಾದ.

ಫಾರಿನ್‌ ಐಟಂ: ವಿಜ್ಞಾನಿಗಳ ಸಂಶೋ ಧನೆ ಪ್ರಕಾರ ಮೆಣಸಿನಕಾಯಿ, ಜೋಳ, ಬೀನ್ಸ್‌, ಪಪಾಯ, ತಾಳೆ ಎಣ್ಣೆಯ ಮೂಲ ಕೇಂದ್ರ ಅಮೆರಿಕ. ಗೋಧಿ, ಈರುಳ್ಳಿ, ಬಟಾಣಿ, ಕ್ಯಾರಟ್‌, ಬಸಲೆ ಸೊಪ್ಪು, ದ್ರಾಕ್ಷಿ ಪಶ್ಚಿಮ ಏಷ್ಯಾ ಮೂಲದವು. ಸಾಸಿವೆ ಮೆಡಿಟರೇನಿಯನ್‌ ಪ್ರಾಂತ್ಯದ್ದಾದರೆ, ಆಲೂಗಡ್ಡೆ, ಟೊಮೆಟೋ, ಕುಂಬಳಕಾಯಿ ದಕ್ಷಿಣ ಅಮೆರಿಕಕ್ಕೆ ಸೇರಿದವು. ಬೆಳ್ಳುಳ್ಳಿ, ಸೇಬು ಕೇಂದ್ರ ಏಷ್ಯಾದಿಂದ ಬಂದಿದ್ದರೆ, ಎಲೆಕೋಸು, ಕಿತ್ತಳೆ, ಸೋಯಾಬೀನ್‌ ಪೂರ್ವ ಏಷ್ಯಾದಿಂದ ಇಲ್ಲಿಗೆ ಬಂದಿವೆ. ಬಿಳಿ ಜೋಳ, ಕಾಫಿ, ಅಲಸಂದೆ ಕಾಳು ಆಫ್ರಿಕಾದ ಕೊಡುಗೆಯಾಗಿದ್ದರೆ, ಬಾಳೆಹಣ್ಣು, ತೆಂಗು ಆಗ್ನೇಯ ಏಷ್ಯಾಕ್ಕೆ ಸೇರಿದವಾಗಿವೆ.

ಭಾರತದ ಕೊಡುಗೆ ಏನು?: ಬಾಳೆ, ಕಡಲೆ, ಚಕ್ಕೆ, ಲವಂಗ, ತೆಂಗು, ಸೌತೆಕಾಯಿ, ಖರ್ಜೂರ, ಬದನೆ, ಶುಂಠಿ, ನಿಂಬೆ, ಅವರೆ, ಮಾವು, ಕಲ್ಲಂಗಡಿ, ಕರಬೂಜ, ರಾಗಿ, ಜೋಳ, ನವಣೆಯಂತಹ ಧಾನ್ಯಗಳು, ಅಕ್ಕಿ, ಎಳ್ಳು, ಕಬ್ಬು, ಚಹಾ ಭಾರತೀಯ ಮೂಲದವು.
177 ರಾಷ್ಟ್ರಗಳ 140ಕ್ಕೂ ಹೆಚ್ಚು ತರಕಾರಿ ಗಳ ಕುರಿತು ಸಮಗ್ರ ಅಧ್ಯಯನ ನಡೆಸಿದ ವಿಜ್ಞಾನಿಗಳ ತಂಡ ಇಂಥದ್ದೊಂದು ಅಚ್ಚರಿಯ ವರದಿಯನ್ನು ಸಿದ್ಧಪಡಿಸಿದೆ.

ಇನ್ನು ಭಾರತದಲ್ಲಿ ಬಳಸಲಾಗುವ ತರಕಾರಿಗಳನ್ನು ಕ್ಯಾಲೋರಿ ಲೆಕ್ಕಾಚಾರ ಹಾಕುವುದಾದರೆ, ದೇಶದ ರಾಷ್ಟ್ರೀಯ ಉತ್ಪಾದನೆಯಲ್ಲಿ ಶೆ.45ರಷ್ಟು ಪಾಲು ವಿದೇಶಿ ಮೂಲ ಹೊಂದಿರುವ ತರಕಾರಿ ಗಳದ್ದೇ ಆಗಿದೆ.

Trending videos

Back to Top