CONNECT WITH US  

ಮೂವರು ಮಕ್ಕಳ ಸಹಿತ ಕೆರೆಗೆ ಹಾರಿ ಮಹಿಳೆಯ ಆತ್ಮಹತ್ಯೆ

ಬಿಕಾನೇರ್‌ : 26 ವರ್ಷ ಪ್ರಾಯದ ಮಹಿಳೆಯೊಬ್ಬಳು ತನ್ನ  ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಶ್ರೀಗಂಗಾನಗರದಿಂದ ವರದಿಯಾಗಿದೆ.

ಚಕ್‌-6 ಬಿಜಿಎಸ್‌ ಗ್ರಾಮದ ನಿವಾಸಿಯಾಗಿರುವ ಸರೋಜ್‌ ಎಂಬಾಕೆ ನಿನ್ನೆ ಸೋಮವಾರ ತಡ ರಾತ್ರಿ ತನ್ನ ಇಬ್ಬರು ಪುತ್ರರಾದ ಅರುಣ್‌ 4, ಗೌರವ್‌ 6 ತಿಂಗಳು ಮತ್ತು ಪುತ್ರಿ ಪ್ರಿಯಾಂಕಾ (ಎರಡೂವರೆ ವರ್ಷ ಪ್ರಾಯ) ಮನೆ ಸಮೀಪದ ಕೃಷಿ ಭೂಮಿಯಲ್ಲಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳೆಂದು ಲಾಲಗಢ ಜತನ್‌ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಮಾಲಕೀತ್‌ ಸಿಂಗ್‌ ತಿಳಿಸಿದ್ದಾರೆ.

ಇಂದು ಮಂಗಳವಾರ ಶವಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಗಿದೆ ಎಂದವರು ಹೇಳಿದ್ದಾರೆ.

ಸರೋಜಾಳ ಪತಿ ಸೋಮವಾರ ರಾತ್ರಿ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಸರೋಜಾಗೆ ಮದುವೆಯಾಗಿ ಆರು ವರ್ಷಗಳಾಗಿವೆ ಮತ್ತು ಆಕೆಗೆ ಮನೆಯ ಸಮಸ್ಯೆಗಳಿಂದಾಗಿ ಖಿನ್ನತೆ ಇತ್ತೆಂದು ತಿಳಿದುಬಂದಿದೆ. ಪೊಲೀಸು ಕೇಸು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. 

Trending videos

Back to Top