CONNECT WITH US  

ಕೇಂದ್ರ ಸಚಿವ ಶರ್ಮಾ ಭದ್ರತಾ ಸಿಬ್ಬಂದಿಯಿಂದ ಗಾರ್ಡ್‌ಗೆ ಕಪಾಳ ಮೋಕ್ಷ

ಗಾಜಿಯಾಬಾದ್‌ : ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆಯ ರಾಜ್ಯ ಸಚಿವ ಮಹೇಶ್‌ ಶರ್ಮಾ ಅವರ ಭದ್ರತಾ ಸಿಬ್ಬಂದಿ ಗೇಟ್‌ ತೆಗೆಯಲು ತಡಮಾಡಿದ ಗಾರ್ಡ್‌ಗಳನ್ನು ಎಳೆದಾಡಿ ಕಪಾಳಮೋಕ್ಷ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈರಲ್‌ ವಿಡಿಯೋ ನೋಡಿ 

ನಗರದ ಅಶಿಯಾನಾ ಗೇಟ್‌ ಅಪಾರ್ಟ್‌ಮೆಂಟ್‌ನಲ್ಲಿ  ರಕ್ಷಾ ಬಂಧನ ನಿಮಿತ್ತ ಸಹೋದರಿಯನ್ನು ಭೇಟಿಯಾಗಲು ಶರ್ಮಾ ಅವರು ಬಂದಿದ್ದು, ಈ ವೇಳೆ ಘಟನೆ ನಡೆದಿದೆ. 

ಹಲ್ಲೆಗೊಳಗಾದ ಗಾರ್ಡ್‌ ಪ್ರತಿಕ್ರಿಯಿಸಿದ್ದು ಗೇಟ್‌ ತೆಗೆಯಲು 2 ರಿಂದ 3 ನಿಮಿಷ ತಡವಾಗಿದೆ ಅಷ್ಟಕ್ಕೆ ಭದ್ರತಾ ಸಿಬ್ಬಂದಿ ನಮ್ಮ ಮೇಲೆ ಹರಿಹಾಯ್ದು ಹಲ್ಲೆ  ನಡೆಸಿದ ಎಂದಿದ್ದಾರೆ. 

ಸಚಿವರನ್ನು ಕೇವಲ 2 ನಿಮಿಷ ಕಾಯಿಸಿದ್ದಕ್ಕೆ ಸಿಟ್ಟಿಗೆದ್ದ ಭದ್ರತಾ ಸಿಬ್ಬಂದಿ ಗಾರ್ಡ್‌ ಒಬ್ಬನ ಕಪಾಳಕ್ಕೆ ಬಾರಿಸಿದ್ದಾನೆ. ತಡೆಯಲು ಬಂದ ಇನ್ನಿಬ್ಬರು ಗಾರ್ಡ್‌ಗಳ ಮೇಲೂ ಹಲ್ಲೆ ನಡೆಸಿರುವುದು ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶರ್ಮಾ ನಾನು ಘಟನೆ ನಡೆದ ವೇಳೆ ಸ್ಥಳದಲ್ಲಿರಲಿಲ್ಲ. ನಾಲ್ಕು ಬೆಂಗಾವಲು ವಾಹನಗಳೊಂದಿಗೆ ಅಲ್ಲಿಗೆ ತೆರಳಿದ್ದೆ.ತಂಗಿಯ ಮನೆಯಿಂದ ಸೊರ ಬಂದ ಬಳಿಕವಷ್ಟೆ ನನಗೆಘಟನೆ ಬಗ್ಗೆ ತಿಳಿದಿದೆ.  ಈ ಸಂಬಂಧ ಗಾರ್ಡ್‌ಗಳು ಮತ್ತು ಅಲ್ಲಿನ ನಿವಾಸಿಗಳ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. 

ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗದಿರುವ ಕುರಿತು ಅಪಾರ್ಟ್‌ಮೆಂಟ್‌ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Video : Newzstreet TV

Trending videos

Back to Top