CONNECT WITH US  

ರಿಲಯನ್ಸ್‌ ಜಿಯೋ ಲೈಫ್ ಟೈಮ್ ಕರೆ, ರೋಮಿಂಗ್ ಫ್ರೀ

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ತಮ್ಮ ಮಹತ್ವಾಕಾಂಕ್ಷೆಯ "ರಿಲಯನ್ಸ್‌ ಜಿಯೋ' 4ಜಿ ನೆಟ್‌ವರ್ಕ್‌, ಮೊಬೈಲ್‌ ದೂರವಾಣಿ ಕ್ಷೇತ್ರಕ್ಕೆ ಕಾಲಿಡುತ್ತಿವ ಬಗ್ಗೆ ಗುರುವಾರ ಅಧಿಕೃತ ಘೋಷಣೆ ಮಾಡಿದ್ದಾರೆ. ಸೆಪ್ಟೆಂಬರ್‌ 5ರಿಂದ ರಿಲಯನ್ಸ್‌ ಜಿಯೋ ಪ್ರಚಾರಾರ್ಥವಾಗಿ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ.

ರಿಲಯನ್ಸ್‌ ಜಿಯೋದಲ್ಲಿ ಆಜೀವ ಪರ್ಯಂತ ಧ್ವನಿ ಕರೆಗಳು ಮತ್ತು ರಾಷ್ಟ್ರೀಯ ರೋಮಿಂಗ್‌ ಕರೆಗಳು ಸಂಪೂರ್ಣ ಉಚಿತವಾಗಿರಲಿವೆ.  ನಿತ್ಯ 100 ಎಸ್ಸೆಮ್ಮೆಸ್‌ ಉಚಿತ. ಅಲ್ಲದೆ, ಅಗ್ಗದ ದರದಲ್ಲಿ ಇಂಟರ್ನೆಟ್‌ ಡಾಟಾ ಪ್ಯಾಕ್‌ ನೀಡಲಾಗುತ್ತದೆ. ಸೆ.5ರಿಂದ ಆರಂಭವಾಗಿ 4 ತಿಂಗಳವರೆಗೆ ಭರ್ಜರಿ ಆಫ‌ರ್‌ಗಳಿವೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುದಾರರ ಸಭೆಯಲ್ಲಿ ಮುಕೇಶ್‌ ಅವರು ಘೋಷಣೆ ಮಾಡಿದರು.

ಜಿಯೋ ನೆಟ್‌ವರ್ಕ್‌ ಮೂಲಕ ಮಾಡುವ ಧ್ವನಿ ಕರೆಗಳು ಸೆ.5ರಿಂದ ಡಿ.31ರವೆಗೆ ಹಾಗೂ ಡಿ.31ರ ನಂತರವೂ ಸಂಪೂರ್ಣ ಉಚಿತವಾಗಿರಲಿವೆ. ಅಪರೂಪಕ್ಕೊಮ್ಮೆ ಇಂಟರ್ನೆಟ್‌ ಬಳಸುವವರಿಗೆ ನಿತ್ಯದ 19 ರೂ. ಪ್ಲ್ರಾನ್‌ ಹಾಗೂ ಮಾಸಿಕ 149 ರೂ. ಪ್ಲ್ರಾನ್‌ನಿಂದ ಹಿಡಿದು ಮಾಸಿಕ ಗರಿಷ್ಠ 4999 ರೂ.ವರೆಗೂ ಯೋಜನೆಗಳಿವೆ. 

ಭಾರೀ ಹೊಡೆತ: "ರಿಲಯನ್ಸ್‌ ಜಿಯೋ' ಟ್ಯಾರಿಫ್ ಘೋಷಣೆಯಾದ ಬೆನಲ್ಲೇ, ಪ್ರತಿಸ್ಪರ್ಧಿ ಕಂಪನಿಗಳಾದ ಭಾರ್ತಿ ಏರ್‌ಟೆಲ್‌, ಐಡಿಯಾ ಮತ್ತು ರಿಲಯನ್ಸ್‌ ಕಮ್ಯುನಿಕೇಷನ್‌ ಕಂಪನಿಗಳ ಷೇರುಗಳು ಮೌಲ್ಯ ಬಾಂಬೆ ಷೇರು ಮಾರುಕಟ್ಟೆಯಲ್ಲಿ 13800 ಕೋಟಿ ರೂ. ಕುಸಿದಿದೆ.

ಪ್ಲ್ರಾನ್‌ ಉದಾಹರಣೆಗಳು
149 ರೂ. ಪ್ಲ್ರಾನ್‌
28 ದಿನ ವ್ಯಾಲಿಡಿಟಿ, 300 ಎಂಬಿ 4ಜಿ ಡಾಟಾ, ಅನಿಯಮಿತ ಧ್ವನಿಕರೆ ಉಚಿತ, ಮಾಸಿಕ 100 ಎಸ್ಸೆಮ್ಮೆಸ್‌ ಉಚಿತ,  1250 ರೂ. ಮೌಲ್ಯದ  ಜಿಯೋ ಆ್ಯಪ್‌ ಉಚಿತ

ಪರಿಣಾಮ:
ಧ್ವನಿಕರೆ ಉಚಿತವಾದರೂ ಡಾಟಾ ಪ್ಯಾಕ್‌ ಮಾತ್ರ 1 ಜಿಬಿಗೆ ಹೋಲಿಸಿದರೆ ಭಾರಿ ದುಬಾರಿ. 300 ಎಂಬಿಗೆ 149 ರೂ. ಆದರೆ 1 ಜಿಬಿಜೆ 508 ರೂ. ಆದಂತಾಯಿತು.

4999 ರೂ. ಪ್ಲ್ರಾನ್‌
28 ದಿನ ವ್ಯಾಲಿಡಿಟಿ, 75 ಜಿಬಿ 4ಜಿ ಡಾಟಾ, ಅನಿಯಮಿತ ಧ್ವನಿಕರೆ ಉಚಿತ, 150 ಜಿಬಿ ಜಿಯೋ ನೆಟ್‌ ವೈಫೈ ಹಾಟ್‌ಸ್ಪಾಟ್‌ ಸಂಪರ್ಕ, 1250 ರೂ. ಮೌಲ್ಯದ  ಜಿಯೋ ಆ್ಯಪ್‌ ಉಚಿತ

ಪರಿಣಾಮ:
3999ರಿಂದ 4999 ರೂ. ಪ್ಲ್ರಾನ್‌ಗಳಲ್ಲಿ 1 ಜಿಬಿ ಡಾಟಾಗೆ 66.65 ರೂ. ಆಗುತ್ತದೆ. ಹೀಗಾಗಿ ಇದು ಡಾಟಾಪ್ರಿಯರಿಗೆ ಅಗ್ಗ ಎನಿಸುತ್ತದೆ.

50 ರೂ.ಗೆ 1 ಜಿಬಿ ಡಾಟಾ ಹೀಗಾ?
50 ರೂ.ಗೆ 1 ಜಿಬಿ 4ಜಿ ವೇಗದ ಡಾಟಾ ನೀಡುವುದಾಗಿ ರಿಲಯನ್ಸ್‌ ಜಿಯೋ ಹೇಳಿದೆ. ಆದರೆ ಅದು ಹೇಗೆ ಸಿಗುತ್ತದೆ ಎಂಬುದರ ಬಗ್ಗೆ ಖಚಿತವಾಗಿ ಏನನ್ನೂ ಹೇಳಿಲ್ಲ. ಆದರೆ ಆನ್‌ಲೈನ್‌ನಲ್ಲಿ ವಿಶ್ಲೇಷಣೆ ಪ್ರಕಾರ, ಒಂದು ಬಾರಿ ಹಾಕಿಸಿದ ಡಾಟಾ ಮುಗಿದು ಹೋದರೆ, ರೀಚಾರ್ಚ್‌ ವೇಳೆ 50 ರೂ.ಗೆ 1ಜಿಬಿ ಡಾಟಾ ಲಭ್ಯವಾಗಲಿದೆ.

Trending videos

Back to Top