CONNECT WITH US  

ಬಡವರು ಗೋಧಿ ತಿನ್ಬೇಕೊ, ಡಾಟಾ ತಿನ್ನಬೇಕೊ?ಮೋದಿಗೆ ಲಾಲು ಟಾಂಗ್

ಪಾಟ್ನಾ:ಬಡಜನರು ಯಾವುದನ್ನು ತಿನ್ನಬೇಕು, ಅಟ್ಟಾ(ಗೋಧಿ) ತಿನ್ನಬೇಕೋ, ಡಾಟಾ ತಿನ್ನಬೇಕೋ ಎಂದು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು ಶನಿವಾರ ಪ್ರಧಾನಿ ಮೋದಿ ಅವರನ್ನು ಈ ರೀತಿ ಅಣಕಿಸಿದ್ದಾರೆ!

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ತಮ್ಮ ಮಹತ್ವಾಕಾಂಕ್ಷೆಯ "ರಿಲಯನ್ಸ್‌ ಜಿಯೋ' 4ಜಿ ನೆಟ್‌ವರ್ಕ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಲಾಲು ಈ ತಿರುಗೇಟು ನೀಡಿದ್ದಾರೆ.

ಜಿಯೋ ಮಾಧ್ಯಮಗಳಲ್ಲಿ ನೀಡಿರುವ ಪೂರ್ಣ ಪುಟದ ಜಾಹೀರಾತಿನಲ್ಲಿ(ಜಿಯೋ ಡಿಜಿಟಲ್ ಲೈಫ್) ಕಾಣಿಸಿಕೊಂಡಿದ್ದ ಪ್ರಧಾನಿ ಮೋದಿ ವಿರುದ್ಧ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದವು.

ಶನಿವಾರ ಟ್ವೀಟರ್ ನಲ್ಲಿ ಮೋದಿ ಅವರನ್ನು ಟೀಕಿಸಿರುವ ಲಾಲು, ಬಡವರು ಗೋಧಿ ತಿನ್ನಬೇಕೋ, ಡಾಟಾ ತಿನ್ನಬೇಕೋ? ಯಾಕೆಂದರೆ ಡಾಟಾ ಬೆಲೆ ತುಂಬಾ ಕಡಿಮೆ, ಗೋಧಿ ಬೆಲೆಯೇ ಹೆಚ್ಚು. ದೇಶ ಬದಲಾವಣೆಯತ್ತ ಸಾಗುತ್ತಿದೆ ಎಂಬುದರ ಸಾರಾಂಶ ಮೋದಿ ಅವರದ್ದಾಗಿದೆ. ಹಾಗಾಗಿ ಬಡಜನರು ಏನನ್ನು ತಿನ್ನಬೇಕು ಎಂದು ಚಾಟಿ ಬೀಸಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ತಮ್ಮ ಮಹತ್ವಾಕಾಂಕ್ಷೆಯ "ರಿಲಯನ್ಸ್‌ ಜಿಯೋ' 4ಜಿ ನೆಟ್‌ವರ್ಕ್‌, ಮೊಬೈಲ್‌ ದೂರವಾಣಿ ಕ್ಷೇತ್ರಕ್ಕೆ ಕಾಲಿಡುತ್ತಿವ ಬಗ್ಗೆ ಗುರುವಾರ ಅಧಿಕೃತ ಘೋಷಣೆ ಮಾಡಿದ್ದರು. ರಿಲಯನ್ಸ್‌ ಜಿಯೋದಲ್ಲಿ ಆಜೀವ ಪರ್ಯಂತ ಧ್ವನಿ ಕರೆಗಳು ಮತ್ತು ರಾಷ್ಟ್ರೀಯ ರೋಮಿಂಗ್‌ ಕರೆ ಗಳು ಸಂಪೂರ್ಣ ಉಚಿತವಾಗಿರಲಿವೆ. ನಿತ್ಯ 100 ಎಸ್ಸೆಮ್ಮೆಸ್‌ ಉಚಿತ. ಅಲ್ಲದೆ, ಅಗ್ಗದ ದರದಲ್ಲಿ ಇಂಟರ್ನೆಟ್‌ ಡಾಟಾ ಪ್ಯಾಕ್‌ ನೀಡಲಾಗುತ್ತದೆ. ಸೆ.5ರಿಂದ ಆರಂಭವಾಗಿ 4 ತಿಂಗಳವರೆಗೆ ಭರ್ಜರಿ ಆಫ‌ರ್‌ಗಳನ್ನು ಅಂಬಾನಿ ಘೋಷಿಸಿದ್ದರು.

Trending videos

Back to Top