CONNECT WITH US  

ಜಿಎಸ್‌ಎಲ್‌ವಿ - ಎಫ್05 ಉಡಾವಣೆ ಯಶಸ್ವಿ

ಶ್ರೀಹರಿಕೋಟಾ: ಸ್ವದೇಶಿ ಕ್ರಯೋಜೆನಿಕ್‌ ಎಂಜಿನ್‌ನಿಂದ ಚಾಲನೆಗೊಳ್ಳುವ ಜಿಎಸ್‌ಎಲ್‌ವಿ- ಎಫ್05 ರಾಕೆಟ್‌ ಉಡ್ಡಯನ ಗುರುವಾರ ಯಶಸ್ವಿಯಾಗಿದ್ದು, ಅದು ನಿಗದಿಯಂತೆ ಇನ್ಸಾಟ್‌-3ಡಿಆರ್‌ ಉಪಗ್ರಹವನ್ನು ಕಕ್ಷೆಗೆ ಕೂರಿಸಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ಇನ್ನೊಂದು ಸಾಧನೆ ಮಾಡಿದೆ. ಗುರುವಾರ ಸಂಜೆ 4.50ಕ್ಕೆ ಉಡ್ಡಯನ ನೆರವೇರಿದ್ದು, 2,211 ಕೇಜಿ ಉಪಗ್ರಹವನ್ನು ಉಡ್ಡಯನವಾದ 17 ನಿಮಿಷದಲ್ಲಿ ಕಕ್ಷೆಗೆ ಕೂರಿಸಿದೆ. ಇದೇ ಮೊದಲ ಬಾರಿಗೆ ರಾಕೆಟ್‌ನ ಮೇಲಿನ ಹಂತದಲ್ಲಿ ಸ್ವದೇಶಿ ಕ್ರಯೋಜನಿಕ್‌ ಎಂಜಿನ್‌ ಅಳವಡಿಸಲಾಗಿತ್ತು. ಅತ್ಯಾಧುನಿಕ ಇನ್ಸಾಟ್‌-3ಡಿಆರ್‌ ಉಪಗ್ರಹ 10 ವರ್ಷಗಳ ಜೀವಿತಾವಧಿ ಹೊಂದಿರುತ್ತದೆ. ಕರಾವಳಿ ಕಾವಲು ಪಡೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಹಡಗು ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೂ ಈ ಉಪಗ್ರಹ ಬಳಕೆಯಾಗಲಿದೆ. 

ಜಿಎಸ್‌ಎಲ್‌ವಿಗೆ ಇದು 10ನೇ ಉಡ್ಡಯನವಾಗಿದ್ದು, ಅಧಿಕ ಭಾರದ ಉಪಗ್ರಹಗಳನ್ನು ಹೊತ್ತೂಯ್ಯುವುದಕ್ಕೆ ತೀರ ಅಗತ್ಯದ್ದಾಗಿದೆ. 2014ರಿಂದೀಚೆಗೆ ಸತತ ಮೂರನೇ ಜಿಎಸ್‌ಎಲ್‌ವಿ ಉಡಾವಣೆ ಯಶಸ್ವಿಯಾಗಿದೆ. ಇದೇ ವೇಳೆ ಮತ್ತೂಂದು ಸಾಧನೆ ಮೈಲುಗಲ್ಲು ಸ್ಥಾಪಿಸಿದ ಇಸ್ರೋ ವಿಜ್ಞಾನಿಗಳನ್ನು ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಅವರು ಅಭಿನಂದಿಸಿದ್ದಾರೆ.

Trending videos

Back to Top