CONNECT WITH US  

100 ಕಿಮೀ ದೂರದಲ್ಲೇ ಕ್ಷಿಪಣಿ ಹೊಡೆವ ಯುದ್ಧನೌಕೆಗೆ ಚಾಲನೆ

7300 ಟನ್‌: ಈ ಸ್ವದೇಶೀನಿರ್ಮಿತ ಸಮರನೌಕೆಯ ಒಟ್ಟಾರೆ ತೂಕ
2 ಸಾಮರ್ಥ್ಯ: ಭೂಮಿಯ ಹಾಗೂ ಆಕಾಶದ ಗುರಿ ಹೊಡೆವ ಕ್ಷಮತೆ
300 ಮಂದಿ: ಇದರಲ್ಲಿರುತ್ತಾರೆ 50 ಅಧಿಕಾರಿಗಳು ಮತ್ತು 250 ಸಿಬ್ಬಂದಿ
2 ಕಾಪrರ್‌: ಸಬ್‌ಮರೀನ್‌ಗೆ ದಾಳಿ ನಡೆಸಲು ಹೆಲಿಕಾಪ್ಟರ್‌ ಅಳವಡಿಕೆ
1 ರಾಡಾರ್‌: ಇಸ್ರೇಲ್‌ ತಂತ್ರಜ್ಞಾನ, ರಾಡಾರ್‌ನಿಂದ ಅಪಾಯ ಎಚ್ಚರಿಕೆ 

ಮುಂಬೈ: ರಾಡಾರ್‌ಗಳ ಕಣ್ತಪ್ಪಿಸಿ ನುಗ್ಗಿ ಸುಮಾರು 100 ಕಿ.ಮೀ. ದೂರದಲ್ಲಿ ಬರುತ್ತಿರುವ ಕ್ಷಿಪಣಿ ಅಥವಾ ವೈರಿ ವಿಮಾನಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ, ವಿಶ್ವದ ದರ್ಜೆಯ ಸ್ವದೇಶಿ ನಿರ್ಮಿತ ಯುದ್ಧ
ನೌಕೆಯೊಂದು ಶನಿವಾರ ದೇಶದ ವಾಣಿಜ್ಯ ರಾಜಧಾನಿಯ ಕಡಲತಟದಲ್ಲಿ ಲೋಕಾರ್ಪಣೆಗೊಂಡಿದೆ.

ಕಂಗೊಳಿಸುವ ರೀತಿ ಅಲಂಕಾರಗೊಂಡಿದ್ದ ಈ ನೌಕೆಯನ್ನು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ಲಾಂಬಾ ಅವರ ಧರ್ಮಪತ್ನಿ ರೀನಾ ಅವರು ಬೆಳಗ್ಗೆ 11.58ಕ್ಕೆ ಉದ್ಘಾಟಿಸಿದರು. ಸರ್ಕಾರಿ ಸ್ವಾಮ್ಯದ ಮಜಗಾಂವ್‌ ಹಡಗು ಕಟ್ಟೆಯಲ್ಲಿ
ನಿರ್ಮಾಣಗೊಂಡಿರುವ ಈ ಯುದ್ಧ ನೌಕೆ, ನಂತರ ಇದೇ ಮೊದಲ ಬಾರಿಗೆ ಅರಬ್ಬೀ ಸಮುದ್ರಕ್ಕೆ ಇಳಿಯಿತು.

ಇದೇ ವೇಳೆ, ಈ ನೌಕೆಗೆ "ಮೊರ್ಮುಗಾವೋ' (ಗೋವಾ ಬಂದರಿನಹೆಸರು) ಎಂದು ನಾಮಕರಣ ಮಾಡಲಾಗಿದೆ. ಲೋಕಾರ್ಪಣೆ ಗೊಂಡಿರುವ ಈ ನೌಕೆ ನೌಕಾಪಡೆ ಕೆಲವು ದಿನಗಳ ಕಾಲ ಪರೀಕ್ಷೆಗೊಳ ಪಡಿಸಲಿದೆ. ನಂತರ "ಐಎನ್‌ಎಸ್‌ ಮೊರ್ಮುಗಾವೋ' ಎಂದು ಮತ್ತೆ ಮರುನಾಮಕರಣಗೊಳ್ಳಲಿದೆ. ಈ ಯುದ್ಧ ನೌಕೆ ಸ್ವದೇಶಿ ನಿರ್ಮಾಣವಾಗಿರುವುದರಿಂದ ಮೇಕ್‌ ಇನ್‌ ಇಂಡಿಯಾ ಉದ್ದೇಶವನ್ನು ಈಡೇರಿಸಿದೆ ಎಂದು ನೌಕಾಪಡೆ ಮುಖ್ಯಸ್ಥ
ಅಡ್ಮಿರಲ್‌ ಸುನೀಲ್‌ ಲಾಂಬಾ ತಿಳಿಸಿದ್ದಾರೆ. 

ಒಟ್ಟು 29,700 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ನೂತನ ಯುದ್ಧನೌಕೆ ತಯಾರಾಗಲಿದ್ದು, ಈ ಶ್ರೇಣಿಯನೌಕೆಗಳಲ್ಲಿ "ಮೊರ್ಮುಗಾವೋ' ಒಂದಾಗಿದೆ. ಸರಿಸುಮಾರು ಈ ಒಂದೇ ಯುದ್ಧನೌಕೆಯ ವೆಚ್ಚ ಸುಮಾರು 7 ಸಾವಿರ ಕೋಟಿ ರೂ. ಆಗಲಿದೆ. ಈ ಹಿಂದೆ ಐಎನ್‌ಎಸ್‌ ವಿಶಾಖಪಟ್ಟಣಂ ಎಂಬ ಯುದ್ಧನೌಕೆಯನ್ನು ಕಳೆದ ವರ್ಷ ಲೋಕಾರ್ಪಣೆ ಮಾಡಲಾಗಿತ್ತು. ಮಜಗಾಂವ್‌ ಡಾಕ್‌ಶಿಪ್‌ ಬಿಲ್ಡರ್ಸ್‌ ಲಿಮಿಟೆಡ್‌ (ಎಂಡಿಎಲ…) 15ಬಿ ಪ್ರಾಜೆಕ್ಟ್
ಅಡಿಯಲ್ಲಿ ಈ ನೌಕೆಯನ್ನು ನಿರ್ಮಿಸಿದೆ.

ಈ ಯುದ್ಧನೌಕೆಯನ್ನು ನೌಕಾಪಡೆಯಲ್ಲಿ 2020ಕ್ಕೆ ಮುನ್ನ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತದೆ.

ವಿಶೇಷತೆಗಳು: 7300 ಟನ್‌ ತೂಕದ ಈ ಯುದ್ಧ ನೌಕೆ, ಗಂಟೆಗೆ 56 ಕಿ.ಮೀ. ವೇಗದಲ್ಲಿ ಸಾಗಲಿದೆ. ಭೂಮಿಯಿಂದ ಭೂಮಿಗೆ, ಭೂಮಿಯಿಂದ ಗಗನಕ್ಕೆ ಚಿಮ್ಮಿ ಗುರಿ ಹೊಡೆದುರುಳಿಸುವ ಸ್ವಯಂಚಾಲಿತ ಕ್ಷಿಪಣಿ ಹಾಗೂ ಸಬ್‌ಮರೀನ್‌
ಮೇಲೆ ದಾಳಿ ನಡೆಸುವ ರಾಕೆಟ್‌ ಲಾಂಚರ್‌ ಗಳನ್ನು ಇದು ಹೊಂದಿರುತ್ತದೆ. ಇದಲ್ಲದೆ ಸಬ್‌ ಮರೀನ್‌ ವಿರುದ್ಧ ದಾಳಿ ನಡೆಸಲು ಬೇಕಾದ ಎರಡು ಹೆಲಿಕಾಪ್ಟರ್‌ ಕೂಡ ಹೊಂದಿರಲಿದೆ.

ಮೊರ್ಮುಗಾವೋ ಯುದ್ಧನೌಕೆಯಲ್ಲಿ 50 ಮಂದಿ ಅಧಿಕಾರಿಗಳು ಹಾಗೂ 250 ನೌಕಾ ಸಿಬ್ಬಂದಿ ಗಳಿರುತ್ತಾರೆ. ಇದು ಸಮುದ್ರದಲ್ಲಿ ಸುಮಾರು 4 ಸಾವಿರ ನಾಟಿಕಲ… ಮೈಲ… ದೂರದಲ್ಲೂ ಕಾರ್ಯಾ ಚರಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೊರ್ಮುಗೋವಾ ಯುದ್ಧನೌಕೆಯಲ್ಲಿ ಇಸ್ರೇಲ… ತಂತ್ರಜ್ಞಾನದ ಸೂಕ್ಷ್ಮ ನಿಗಾ
ಕಾರ್ಯಾಚರಣೆ ವ್ಯವಸ್ಥೆ ಇದೆ. ಅಪಾಯದ ಮುನ್ಸೂಚನೆ ನೀಡುವ ರಾಡಾರ್‌ ಇದೆ.

Trending videos

Back to Top