CONNECT WITH US  

ಅನಿವಾಸಿ ಭಾರತೀಯರೇ ಭಾರತದ ಶಕ್ತಿ: ಮೋದಿ

ನವದೆಹಲಿ: ಅನಿವಾಸಿ ಭಾರತೀಯರನ್ನು ಕೇವಲ ಸಂಖ್ಯೆಗಳನ್ನಾಗಿ ಎಣಿಕೆ ಮಾಡದೇ ಅವರನ್ನೇ ಶಕ್ತಿಯನ್ನಾಗಿ ಪರಿಗಣಿ
ಸಿದರೆ, ಪ್ರತಿಭಾ ಪಲಾಯನವನ್ನೇ ಲಾಭವನ್ನಾಗಿ ಪರಿವರ್ತಿ ಸಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ವಿದೇಶಗಳಲ್ಲಿ 2.7 ಕೋಟಿ ಮಂದಿ ಅನಿವಾಸಿ ಭಾರತೀಯರಿದ್ದಾರೆ. ಇವರಿಂದಾಗಿ ಇಂದು ಜಗತ್ತು ಹಿಂದೆಂದಿ ಗಿಂತಲೂ ಹೆಚ್ಚು ಭಾರತದೊಂದಿಗೆ ಭಾಗಿಯಾಗುತ್ತಿದೆ. "ಅಪರಿಚಿತ ಭಯ'ದ ಸಂದರ್ಭದಲ್ಲಿ ಅನಿವಾಸಿ ಭಾರತೀ ಯರೇ ನೆರವಾಗುತ್ತಾರೆ. ನಾವು ಭಾರ ತಕ್ಕೆ ಸೇರಿದವರು ಎಂದು ಹೇಳುತ್ತಾರೆ. ಆದ್ದರಿಂದ ಹೆಚ್ಚೆಚ್ಚು ಮಂದಿ ಅನಿವಾಸಿ ಭಾರತೀಯರ ಸಂಪರ್ಕದಲ್ಲಿರುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. 

ದೆಹಲಿಯಲ್ಲಿ ಪ್ರವಾಸಿ ಭಾರತೀಯ ಕೇಂದ್ರವನ್ನು ಉದ್ಘಾಟಿಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಇಲ್ಲಿನ ಚಾಣಕ್ಯಪುರಿಯಲ್ಲಿ ಕೇಂದ್ರ ಸ್ಥಾಪಿಸಲಾಗಿದ್ದು ಅನಿವಾಸಿ ಭಾರತೀಯರಿಗೂ ಸೇರಿದಂತೆ ಸಾಂಸ್ಥಿಕ ಲಾಭಗಳನ್ನು ಪಡೆವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಈ ಕೇಂದ್ರ ಗ್ರಂಥಾಲಯ, ಸಂಶೋಧನಾ ಕೇಂದ್ರ, ಸಭಾಂಗಣ, ಸೇರಿದಂತೆ ಅತಿಥಿ ಗೃಹವನ್ನೂ ಹೊಂದಿದೆ.

Trending videos

Back to Top