CONNECT WITH US  

ಬ್ರಿಕ್ಸ್‌ಗೂ ಮುನ್ನ ಗೋವಾದಲ್ಲಿ ದಾಳಿ: ಪಾಕ್‌ ಉಗ್ರರ ಸಂಚು?

ಹೊಸದಿಲ್ಲಿ: 8ನೇ ಬ್ರಿಕ್ಸ್‌ ಸಮ್ಮೇಳನಕ್ಕೂ ಮುನ್ನ ಗೋವಾದಲ್ಲಿ ಅ.12 ರಿಂದ 14ರ ಮಧ್ಯೆ ಭಾರೀ ಪ್ರಮಾಣದ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕ್‌ ಪ್ರಾಯೋಜಿತ ಭಯೋತ್ಪಾದಕರು ಸಂಚು ರೂಪಿಸಿ ದ್ದಾರೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.

ಗೋವಾದಲ್ಲಿ ಅ.15 ಮತ್ತು 16ರಂದು ಎರಡು ದಿನಗಳ ಬ್ರಿಕ್ಸ್‌ ರಾಷ್ಟ್ರಗಳ ಶೃಂಗ ಸಭೆ ಮತ್ತು ಬೇ ಆಫ್ ಬೆಂಗಾಲ್‌ ರಾಷ್ಟ್ರಗಳ ಆರ್ಥಿಕ ಸಹಕಾರ ಕೂಟ ನಡೆಯಲಿದ್ದು, ಚೀನ ಅಧ್ಯಕ್ಷ ಕ್ಸಿ ಜಿಂಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸೇರಿ 11 ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಭಾರತೀಯ ಸೇನೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್‌ ದಾಳಿಗೆ ಪ್ರತೀಕಾರವಾಗಿ ಶೃಂಗ ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಗೋವಾ ವಿಮಾನ ನಿಲ್ದಾಣದಲ್ಲಿ ಮಾರ್ಕೋಸ್‌ ಕಮಾಂಡೋಗಳನ್ನು ನಿಯೋಜನೆ ಮಾಡಲಾಗಿದೆ.

Trending videos

Back to Top