CONNECT WITH US  

ಬೇಟೆ ಕೇಸ್;ಸಲ್ಮಾನ್ ಗೆ ಶರಣಾಗಲು ಹೇಳಿ; ಸುಪ್ರೀಂ ಮೊರೆ ಹೋದ ರಾಜಸ್ತಾನ

ಜೈಪುರ: ಜಿಂಕೆ ಜಾತಿಯ ಚಿಂಕಾರಾ ಬೇಟೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿದ್ದ 2 ಪ್ರಕರಣಗಳಲ್ಲಿ ನಿರ್ದೋಷಿ ಎಂದು ರಾಜಸ್ಥಾನ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಚಿಂಕಾರಾ ಬೇಟೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ರಾಜಸ್ಥಾನ್ ಹೈಕೋರ್ಟ್ ಜುಲೈ 25ರಂದು ಸಲ್ಮಾನ್ ಖಾನ್  ನಿರ್ದೋಷಿ ಎಂದು ತೀರ್ಪು ನೀಡಿತ್ತು.

ನಟ ಸಲ್ಮಾನ್ ಖಾನ್ ಗೆ ಕೂಡಲೇ ಶರಣಾಗುವಂತೆ ನಿರ್ದೇಶನ ನೀಡಬೇಕೆಂದು ರಾಜಸ್ಥಾನ್ ಸರ್ಕಾರ ಸುಪ್ರೀಂಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಮನವಿ ಮಾಡಿಕೊಂಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

1998ರಲ್ಲಿ ಜೋಧಪುರ ದಲ್ಲಿ "ಹಮ್ ಸಾಥ್‌ ಸಾಥ್‌ ಹೈ' ಚಿತ್ರದ ಚಿತ್ರೀಕರಣದ ವೇಳೆ ಕಾನ್‌ಕಾನಿ ಎಂಬ ಗ್ರಾಮದ ಬಳಿ ಎರಡು ಚಿಂಕಾರಗಳನ್ನು ಸಲ್ಮಾನ್‌ ಹತ್ಯೆ ಮಾಡಿದ್ದ ಪ್ರಕರಣ ಇದಾಗಿದೆ.

ಕೆಳ ನ್ಯಾಯಾಲಯ ಈ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.  ಇದನ್ನು ಪ್ರಶ್ನಿಸಿ ಖಾನ್‌ ರಾಜಸ್ಥಾನ ಹೈಕೋರ್ಟ್‌ ಮೊರೆ ಹೋಗಿದ್ದರು. ಇತ್ತೀಚೆಗೆ ತೀರ್ಪು ಪ್ರಕಟಿಸಿದ ನ್ಯಾಯಾಲಯ, "ಮೃತ ಚಿಂಕಾರಗಳಿಂದ ವಶಪಡಿಸಿಕೊಳ್ಳಲಾದ ಸಣ್ಣಗುಂಡುಗಳು ಖಾನ್‌ ಅವರ ಲೈಸೆನ್ಸ್‌ ಹೊಂದಿದ ಗನ್‌ನಿಂದ ಸಿಡಿದವಾಗಿರಲಿಲ್ಲ' ಎಂದು ಹೇಳಿ ಖುಲಾಸೆಗೊಳಿಸಿತ್ತು.

ಏನಿದು ಪ್ರಕರಣ?: ಖಾನ್‌ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆ 51ರ ಅಡಿ 2 ಪ್ರತ್ಯೇಕ ಪ್ರಕರ ಣಗಳು ದಾಖಲಾಗಿದ್ದವು. 1998ರ ಸೆಪ್ಟೆಂಬರ್‌ 26, 27ರಂದು 2 ಚಿಂಕಾರಾಗ ಳನ್ನು ಭಾವಾಡ್‌ ಗ್ರಾಮದಲ್ಲಿ ಕೊಂದಿದ್ದ ಪ್ರಕರಣ ಹಾಗೂ 1998ರ ಸೆಪ್ಟೆಂಬರ್‌ 28, 29ರಂದು ಮಥಾನಿಯಾದಲ್ಲಿ ಒಂದು ಚಿಂಕಾರಾ ವನ್ನು ಕೊಂದಿದ್ದ ಆರೋಪವನ್ನು ಖಾನ್‌ ಎದುರಿಸುತ್ತಿದ್ದರು. ಈ ಪ್ರಕರಣ ಸಂಬಂಧ 2007ರಲ್ಲಿ ಒಂದು ವಾರ ಜೈಲುವಾಸವನ್ನೂ ಅನುಭವಿಸಿದ್ದರು.

ವಿಚಾರಣಾ ಕೋರ್ಟ್‌ 2006ರ ಫೆ. 17 ಹಾಗೂ 2006ರ ಏಪ್ರಿಲ್ 10ರಂದು 2 ಪ್ರಕರಣಗಳಲ್ಲಿ ಖಾನ್‌ ದೋಷಿ ಎಂದು ತೀರ್ಪು ನೀಡಿ, ಒಂದು ಪ್ರಕರಣದಲ್ಲಿ 1 ವರ್ಷ ಹಾಗೂ ಮತ್ತೂಂದು ಪ್ರಕರಣ ದಲ್ಲಿ 5 ವರ್ಷ ಶಿಕ್ಷೆ ವಿಧಿಸಿತ್ತು.


Trending videos

Back to Top