CONNECT WITH US  

ಹೆಚ್ಚು ಬೀದಿನಾಯಿಗಳನ್ನು ಕೊಂದವರಿಗೆ ಚಿನ್ನದ ನಾಣ್ಯ!

ತಿರುವನಂತಪುರಂ: ಕೇರಳದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಗಿದ್ದು, ಕಳೆದ ನಾಲ್ಕು ತಿಂಗಳಿನಲ್ಲಿ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ. 10ರ ವರೆಗೆ ಅತಿ ಹೆಚ್ಚು ಬೀದಿ ನಾಯಿಗಳನ್ನು ಸಂಹಾರ ಮಾಡುವ ಪಂಚಾಯತ್‌ ಮತ್ತು ನಗರ ಪಾಲಿಕೆಗಳಿಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಪ್ರತಿಷ್ಠಿತ ಕಾಲೇಜೊಂದರ ಹಳೆಯ ವಿದ್ಯಾರ್ಥಿಗಳ ಸಂಘಟನೆಯೊಂದು ಘೋಷಿಸಿದೆ. 

ಸೇಂಟ್‌ ಥಾಮಸ್‌ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ವೆಲ್‌ಫೇರ್‌ ಅಸೋಸಿಯೇಷನ್‌ ಪಂಚಾಯತ್‌ ಮತ್ತು ನಗರ ಪಾಲಿಕೆ ಮುಖ್ಯಸ್ಥರಿಗೆ ಚಿನ್ನದ ನಾಣ್ಯದ ಉಡುಗೊರೆಗಳನ್ನು ನೀಡಲಾಗುವುದು ಹೇಳಿದೆ. 1200 ಸದಸ್ಯರಿಂದ ದೇಣಿಗೆ ಸಂಗ್ರಹಿಸಿ, ಚಿನ್ನದ ನಾಣ್ಯಗಳನ್ನು ಖರೀದಿಸಲಾಗುವುದು. ಬೀದಿ ನಾಯಿಗಳಿಂದದ ಜನರಿಗೆ ರಕ್ಷಣೆ ಒದಗಿಸುವುದು ನಮ್ಮ ಉದ್ದೇಶ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೇಮ್ಸ್‌ ಪಂಬಯಕ್ಕಲ್‌ ಹೇಳಿದ್ದಾರೆ. ಸಬ್ಸಿಡಿ ದರದಲ್ಲಿ ಏರ್‌ಗನ್‌ಗಳನ್ನು ಒದಗಿಸಿದ ಕಾರಣಕ್ಕಾಗಿ ಈ ಸಂಘಟನೆ ಇತ್ತಿಚೆಗೆ ಸುದ್ದಿಯಲ್ಲಿತ್ತು.

Trending videos

Back to Top