CONNECT WITH US  

ಆರ್‌ಬಿಐ ಗವರ್ನರ್‌ಗೆ ತುರ್ತು ಕರೆ: 2,420 ಕೋ. ತರಿಸಿಕೊಂಡ ನಾಯ್ಡು

ಹೈದರಾಬಾದ್‌: ದೇಶವನ್ನು ಸದ್ಯೋಭವಿಷ್ಯದಲ್ಲೇ ನಗದು ರಹಿತ ವ್ಯವಹಾರಗಳ "ಡಿಜಿಟಲ್‌ ಆರ್ಥಿಕತೆ'ಯನ್ನಾಗಿ  ಪರಿವರ್ತಿಸುವ ಯತ್ನದಲ್ಲಿ ತೊಡಗಿರುವ ಉನ್ನತಾಧಿಕಾರದ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದ್ದಂತೆಯೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತನ್ನ ರಾಜ್ಯದಲ್ಲೇ ನಗದು ಹಣವೇ ಇಲ್ಲ; ಕೂಡಲೇ ನಮ್ಮ ನೆರವಿಗೆ ಬನ್ನಿ ಎಂದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ಗೆ ಫೋನ್‌ ಮಾಡಿ 2,420 ಕೋಟಿ ರೂ. ನಗದನ್ನು ಪಡೆದಿರುವ ಘಟನೆ ವರದಿಯಾಗಿದೆ.

ಊರ್ಜಿತ್‌ ಪಟೇಲ್‌ ಅವರು ನಾಯ್ಡು ಅವರ ತುರ್ತು ಕರೆಯನ್ನು ಮನ್ನಿಸಿ ವಿಶಾಖಪಟ್ಟಣ ಮತ್ತು ತಿರುಪತಿಗೆ ಬಾಡಿಗೆ ವಿಮಾನವನ್ನು ಗೊತ್ತು ಪಡಿಸಿಕೊಂಡು 2,420 ಕೋಟಿ ರೂ. ಹೊಸ ನೋಟುಗಳ ನಗದನ್ನು ಪೂರೈಸಿರುವುದಾಗಿ ವರದಿಯಾಗಿದೆ. 

ಆಂಧ್ರಪ್ರದೇಶದಲ್ಲಿ ನಗದು ಹಣವೇ ಇಲ್ಲದೇ ತೀವ್ರವಾಗಿ ಬಾಧಿತವಾಗಿದ್ದ ಹಲವು ಜಿಲ್ಲೆಗಳಿಗೆ ತಲಾ 240 ಕೋಟಿ ರೂ. ಮತ್ತು ಇತರ ಜಿಲ್ಲೆಗಳಿಗೆ ತಲಾ 160 ಕೋಟಿ ರೂ.ಗಳನ್ನು, ಆರ್‌ಬಿಐ ನೀಡಿರುವ ನೆರವು ಮೊತ್ತದಲ್ಲಿ, ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಆರ್‌ಬಿಐ ತುರ್ತಾಗಿ ಕಳುಹಿಸಿಕೊಟ್ಟಿದ್ದ  ನಗದು ಹಣವನ್ನು ಹೊತ್ತ ಟ್ರೂ ಜೆಟ್‌ ಬಾಡಿಗೆ ವಿಮಾನವು ಶುಕ್ರವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಲ್ಯಾಂಡ್‌ ಆಗಿರುವುದನ್ನು ಗನ್ನಾವರಂ ವಿಮಾನ ನಿಲ್ದಾಣದ ನಿರ್ದೇಶಕ ಜಿ ಮಧುಸೂದನ್‌ ರಾವ್‌ ದೃಢೀಕರಿಸಿದ್ದಾರೆ. 

Trending videos

Back to Top