CONNECT WITH US  

ಮೋದಿ ಫೋಟೊ ಬಳಸಿದ್ದಕ್ಕೆ ಜಿಯೋಗೆ 500 ರೂ. ದಂಡ?

ನವದೆಹಲಿ: ಜಿಯೋ ಮೊಬೈಲ್‌ ಜಾಹೀರಾತಿಗೆ ಸರ್ಕಾರದ ಅನುಮತಿ ಇಲ್ಲದೆಯೇ ಪ್ರಧಾನಿ ಮೋದಿಯವರ ಚಿತ್ರ ಬಳಸಿಕೊಂಡ ರಿಲಯನ್ಸ್‌ ಕಂಪನಿಗೆ 500 ರೂ. ದಂಡ ವಿಧಿಸಲು ಸರ್ಕಾರ ಯೋಚಿಸುತ್ತಿದೆ.1950ರ ಚಿಹ್ನೆ ಹಾಗೂ ಹೆಸರುಗಳ ಅಸಮರ್ಪಕ ಬಳಕೆ ಕಾನೂನಿನಡಿ ರಿಲಯನ್ಸ್‌ ಗೆ ದಂಡ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಕಾಯ್ದೆಯನ್ವಯ ಸರ್ಕಾರದ ಯಾವುದೇ ನಿರ್ದಿಷ್ಟ ಹೆಸರು ಅಥವಾ ಚಿಹ್ನೆಯನ್ನು ವ್ಯಾಪಾರ, ಉದ್ಯಮಂತಹ ಚಟುವಟಿಕೆಗಳಿಗೆ  ಸರ್ಕಾರದ ಅನುಮತಿ ಇಲ್ಲದೆ ಉಪಯೋಗಿಸುವಂತಿಲ್ಲ. 

Trending videos

Back to Top