CONNECT WITH US  

ಮುಂಬಯಿ:ಅರಣ್ಯದಲ್ಲಿ ಹೆಲಿಕ್ಯಾಪ್ಟರ್‌ ಪತನ,2 ಸಾವು 

ಮುಂಬಯಿ: ಇಲ್ಲಿನ ಗೊರೇಗಾಂವ್‌  ಅರಣ್ಯ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಹೆಲಿಕ್ಯಾಪ್ಟರ್‌ವೊಂದು ಪತನಗೊಂಡಿದ್ದು, ದುರ್ಘ‌ಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ರಾಬಿನ್‌ಸನ್‌ ಆರ್‌ 44 ಕಂಪೆನಿಗೆ ಸೇರಿದ ವಿಮಾನ ಅರೇ ಕಾಲೋನಿ ಪ್ರದೇಶದಲ್ಲಿ ಮಧ್ಯಾಹ್ನ 12.45 ರ ವೇಳೆಗೆ ಪತನಗೊಂಡಿದೆ. ಪೈಲಟ್‌ ಪವನ್‌ಕುಮಾರ್‌ ಮತ್ತು ಕ್ಯಾಪ್ಟರ್‌ನಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಪತನಗೊಂಡ ಬಳಿಕ ಸ್ಥಳದಲ್ಲಿ  ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಕ್ಯಾಪ್ಟರ್‌ ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿ ನಂದಿಸಿದ್ದಾರೆ. ಗಾಯಾಗಳಿಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

1992 ನಿರ್ಮತ ಕ್ಯಾಪ್ಟರ್‌ ಪವನ್‌ ಹಂಸ್‌ಗೆ ಸೇರಿದ್ದಾಗಿದ್ದು , ಅದನ್ನು ಖಾಸಗಿ ವಿಮಾನ ಕಂಪೆನಿಗೆ ಮಾರಟ ಮಾಡಲಾಗಿದ್ದು  ಜಾಯ್‌ ರೈಡ್‌ಗಾಗಿ ಬಳಸಲಾಗುತ್ತಿತ್ತು. 

Trending videos

Back to Top