CONNECT WITH US  

ಎಪ್ರಿಲ್‌ನಿಂದ ಬೆಂಗ್ಳೂರಿನಲ್ಲಿ ಆ್ಯಪಲ್‌ ಫೋನ್‌ ಉತ್ಪಾದನೆ

ಹೊಸದಿಲ್ಲಿ: ವಿಶ್ವದ ಪ್ರಸಿದ್ಧ ಮೊಬೈಲ್‌ ತಯಾರಿಕಾ ಕಂಪೆನಿಯಾದ ಆ್ಯಪಲ್‌, ಮುಂದಿನ ವರ್ಷದಿಂದ ಭಾರತದಲ್ಲೇ ಐ ಫೋನ್‌ಗಳನ್ನು ಉತ್ಪಾದನೆ ಮಾಡಲಿದ್ದು, ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸಿದೆ. ಈ ಘಟಕದಲ್ಲಿ 2017ರ ಏಪ್ರಿಲ್‌ನಿಂದ ಆ್ಯಪಲ್‌ ಫೋನ್‌ಗಳ ಉತ್ಪಾದನೆ ಆರಂಭವಾಗಲಿದೆ. ತೈವಾನಿನ ಆ್ಯಪಲ್‌ ಉತ್ಪಾದನಾ ಜತೆಗಾರ ವಿಸ್ಟ್ರೋನ್‌ ಪೀಣ್ಯದಲ್ಲಿ ಘಟಕವನ್ನು ಸ್ಥಾಪಿಸಿದೆ.

ಹಾಲಿ, ಭಾರತಕ್ಕೆ ಚೀನದಿಂದ ಆ್ಯಪಲ್‌ಪೋನ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಶೇ. 12.5ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ. ಹೀಗಾಗಿ ಕೆಲ ದಿನಗಳ ಹಿಂದಕ್ಕೆ ಭಾರತದಲ್ಲೇ ಭೇಟಿ ಕೊಟ್ಟಿದ್ದ ಆ್ಯಪಲ್‌ ಸಿಇಒ ಟಿಮ್‌ ಕುಕ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದ, ವೇಳೆ ಭಾರತದಲ್ಲೇ ಮೊಬೈಲ್‌ ತಯಾರಿಸುವ ಪ್ರಸ್ತಾಪ ಮಾಡಿದ್ದರು.

ಬೆಂಗಳೂರಿನಲ್ಲೇ ಏಕೆ?: ಜಾಗತಿಕ ಸ್ಟಾರ್ಟ್‌ಅಪ್‌ ಕಂಪೆನಿ ಗಳ ಸ್ಥಾಪನೆಗೆ ಬೆಂಗಳೂರು ಪ್ರಶಸ್ತ ಸ್ಥಳ ವೆನಿಸಿಕೊಂಡಿದ್ದು, ಸ್ಟಾಟ್‌ಅಪ್‌ ಕಂಪೆನಿಗಳಿಗೆ ಸರಕಾರದಿಂದಲೂ ಉತ್ತಮ ಬೆಂಬಲ ದೊರೆಯುತ್ತಿದೆ. ಸ್ಟಾರ್ಟ್‌ಅಪ್‌ ಕಂಪೆನಿಗಳ ಬೆಳವಣಿಗೆ ಯಲ್ಲಿ ಬರ್ಲಿನ್‌ ಬಳಿಕ ಬೆಂಗಳೂರು ಅನಂತರದ ಸ್ಥಾನದಲ್ಲಿದೆ. ವಿಶ್ವದಲ್ಲೇ 7ನೇ ಅತಿದೊಡ್ಡ ಬಂಡವಾಳ ಆಕರ್ಷಣೆ ಕೇಂದ್ರ ವೆನಿಸಿಕೊಂಡಿದೆ.

Trending videos

Back to Top