CONNECT WITH US  

ವಾನಿ ಹತ್ಯೆ ಬಳಿಕ 59 ಜನ ಉಗ್ರ ಸಂಘಟನೆಗೆ ಸೇರ್ಪಡೆ!

ಶ್ರೀನಗರ: 2016ರಲ್ಲಿ 160 ಉಗ್ರರು ಹಾಗೂ 81 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಜಮ್ಮು ಕಾಶ್ಮೀರ ವಿಧಾನಸಭೆಗೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಧಾನಸಭೆಗೆ ತಿಳಿಸಿದ್ದಾರೆ.

ಇನ್ನು ಕಳೆದ ವರ್ಷಕ್ಕಿಂತ ಉಗ್ರ ಚಟುವಟಿಕೆಗಳು 2016ರಲ್ಲಿ ಹೆಚ್ಚು ನಡೆದಿವೆ. 2016ರ ಡಿ.21ರವರೆಗೆ 216 ಉಗ್ರ ಕೃತ್ಯಗಳು ಕಣಿವೆ ರಾಜ್ಯದಲ್ಲಿ ವರದಿಯಾಗಿವೆ. 2015ರಲ್ಲಿ 143 ಹಾಗೂ 2014ರಲ್ಲಿ 151 ಪ್ರಕರಣಗಳು ನಡೆದಿದ್ದವು.
ಇದೇ ವೇಳೆ ಹಿಜ್ಬುಲ್‌ ಮುಜಾಹಿದೀನ್‌ ಉಗ್ರಗಾಮಿ ಬುರ್ಹಾನ್‌ ವಾನಿ ಹತ್ಯೆ ನಂತರ 59 ಕಾಶ್ಮೀರಿ ಯುವಕರು ಉಗ್ರ ಸಂಘಟನೆಗೆ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ 2600 ಕಲ್ಲೆಸೆತ ಪ್ರಕರಣಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.


Trending videos

Back to Top