CONNECT WITH US  

ರಚನಾತ್ಮಕ ಸಂಬಂಧ ಸ್ಥಾಪನೆ: ಚೀನಾಕ್ಕೆ ಟ್ರಂಪ್‌

ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕ-ಚೀನಾ ಬಾಂಧವ್ಯ ವೃದ್ಧಿಗಾಗಿ ಎರಡೂ ದೇಶಗಳ ಮಧ್ಯೆ ರಚನಾತ್ಮಕ ಸಂಬಂಧ ಸ್ಥಾಪಿಸೋಣ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ರ ಬರೆದಿದ್ದಾರೆ.  ಅಲ್ಲದೇ ಜೊತೆ ಜೊತೆಗೇ ಕೆಲಸ ಮಾಡುವ ಅವಕಾಶಕ್ಕಾಗಿ ಎದುರು ನೋಡುವುದಾಗಿ ಟ್ರಂಪ್‌ ಅದರಲ್ಲಿ ಬರೆದಿದ್ದಾರೆ. ಅಮೆರಿಕ ಅಧ್ಯಕ್ಷರಾದ ಬಳಿಕ ಇದು ಅವರ ಮೊದಲನೇ ಪತ್ರ.   ಟ್ರಂಪ್‌ ಪತ್ರಕ್ಕೆ ಪ್ರತಿಯಾಗಿ ಚೀನಾದ ವಿದೇಶಾಂಗ ವಕ್ತಾರರೂ ಪ್ರತಿಕ್ರಿಯಿಸಿದ್ದು, ಸಹಕಾರವೇ ನಮ್ಮ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ. ಈ ಮೊದಲು ಚುನಾವಣೆ ವೇಳೆ ಟ್ರಂಪ್‌ ಚೀನಾ ವಿರುದ್ಧ ನಿರಂತರ ವಾಗ್ಧಾಳಿ ನಡೆಸಿದ್ದು ಗಮನಾರ್ಹ. ಅಟಾರ್ನಿ ಜನರಲ್‌ ನೇಮಕ: ಅಮೆರಿಕದ ಅಟಾರ್ನಿ ಜನರಲ್‌ ಆಗಿ ಟ್ರಂಪ್‌ ಸರ್ಕಾರ ಅಲಾºಮಾದ ಸೆನೆಟರ್‌ ಜೆಫ್ ಸೆಸನ್ಸ್‌ ಅವರನ್ನು ನೇಮಕ ಮಾಡಿದೆ. 52-47 ಮತಗಳ ಅಂತರದಿಂದ ಅಟಾರ್ನಿ ಜನರಲ್‌ ಹುದ್ದೆಗೆ ಅವರು ಆಯ್ಕೆಯಾಗಿದ್ದಾರೆ. 


Trending videos

Back to Top