ರಚನಾತ್ಮಕ ಸಂಬಂಧ ಸ್ಥಾಪನೆ: ಚೀನಾಕ್ಕೆ ಟ್ರಂಪ್
Team Udayavani, Feb 10, 2017, 3:45 AM IST
ವಾಷಿಂಗ್ಟನ್/ಬೀಜಿಂಗ್: ಅಮೆರಿಕ-ಚೀನಾ ಬಾಂಧವ್ಯ ವೃದ್ಧಿಗಾಗಿ ಎರಡೂ ದೇಶಗಳ ಮಧ್ಯೆ ರಚನಾತ್ಮಕ ಸಂಬಂಧ ಸ್ಥಾಪಿಸೋಣ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರ ಬರೆದಿದ್ದಾರೆ. ಅಲ್ಲದೇ ಜೊತೆ ಜೊತೆಗೇ ಕೆಲಸ ಮಾಡುವ ಅವಕಾಶಕ್ಕಾಗಿ ಎದುರು ನೋಡುವುದಾಗಿ ಟ್ರಂಪ್ ಅದರಲ್ಲಿ ಬರೆದಿದ್ದಾರೆ. ಅಮೆರಿಕ ಅಧ್ಯಕ್ಷರಾದ ಬಳಿಕ ಇದು ಅವರ ಮೊದಲನೇ ಪತ್ರ. ಟ್ರಂಪ್ ಪತ್ರಕ್ಕೆ ಪ್ರತಿಯಾಗಿ ಚೀನಾದ ವಿದೇಶಾಂಗ ವಕ್ತಾರರೂ ಪ್ರತಿಕ್ರಿಯಿಸಿದ್ದು, ಸಹಕಾರವೇ ನಮ್ಮ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ. ಈ ಮೊದಲು ಚುನಾವಣೆ ವೇಳೆ ಟ್ರಂಪ್ ಚೀನಾ ವಿರುದ್ಧ ನಿರಂತರ ವಾಗ್ಧಾಳಿ ನಡೆಸಿದ್ದು ಗಮನಾರ್ಹ. ಅಟಾರ್ನಿ ಜನರಲ್ ನೇಮಕ: ಅಮೆರಿಕದ ಅಟಾರ್ನಿ ಜನರಲ್ ಆಗಿ ಟ್ರಂಪ್ ಸರ್ಕಾರ ಅಲಾºಮಾದ ಸೆನೆಟರ್ ಜೆಫ್ ಸೆಸನ್ಸ್ ಅವರನ್ನು ನೇಮಕ ಮಾಡಿದೆ. 52-47 ಮತಗಳ ಅಂತರದಿಂದ ಅಟಾರ್ನಿ ಜನರಲ್ ಹುದ್ದೆಗೆ ಅವರು ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…