CONNECT WITH US  

ಕೆಂಪು ಉಗ್ರರ ಹಾಟ್‌ಬೆಡ್‌ನ‌ಲ್ಲಿ ಹಳಿ ಕಾಯುವ ದಿಟ್ಟೆ!

ದಂತೇವಾಡ: ಭದ್ರತಾ ಸಿಬ್ಬಂದಿಯೂ ಈ ಪ್ರದೇಶಕ್ಕೆ ಬರಲು ಹೆದರುತ್ತಾರೆ, ಪೊಲೀಸರೂ ನಡುಗುತ್ತಾರೆ. ಏಕೆಂದರೆ, ಇದು ಕೆಂಪು ಉಗ್ರರ ಹಾಟ್‌ಬೆಡ್‌. ಆದರೆ, ಇಲ್ಲಿ ಸೂರ್ಯೋದಯವಾಗುತ್ತಿದ್ದಂತೆಯೇ ಎದ್ದು 7 ಕಿ.ಮೀ. ಉದ್ದದ ರೈಲ್ವೆ ಹಳಿಯನ್ನು ಏಕಾಂಗಿಯಾಗಿ ಕಾಯುವ ಕೆಲಸ ಮಾಡುತ್ತಿರುವುದು ಒಬ್ಬ ಮಹಿಳೆ! ಹೌದು. ಇದು ಛತ್ತೀಸ್‌ಗಡದ ಬಸ್ತಾರ್‌ ಪ್ರದೇಶದ ಸಾವಿತ್ರಿ ನಾಗ್‌ ಯಾದವ್‌(35) ಎಂಬ ದಿಟ್ಟೆಯ ಕಥೆ.

ಈಕೆ ಗೀಡಂನಿಂದ ಕುಲೂ°ರ್‌ವರೆಗಿನ ರೈಲು ಹಳಿಯನ್ನು ಪ್ರತಿ ದಿನ ಕಾಯುತ್ತಾಳೆ. ಮಾವೋವಾದಿಗಳ ಬಾಹುಳ್ಯವಿರುವ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಏಕೈಕ ಕ್ಷೇತ್ರ ಸಿಬ್ಬಂದಿಯಾಗಿರುವ ಸಾವಿತ್ರಿ ಹಳಿಯುದ್ದಕ್ಕೂ ಸಂಚರಿಸಿ, ಫಿಶ್‌ಪ್ಲೇಟ್‌ನಿಂದ ಲೋಹದ ತುಂಡಿನವರೆಗೆ ಎಲ್ಲವನ್ನೂ ಪರಿಶೀಲಿಸುತ್ತಾಳೆ.  ಈ ಹಳಿಯಲ್ಲಿ ಪ್ರತಿದಿನ ಒಂದು ಪ್ರಯಾಣಿಕ ರೈಲು ಮತ್ತು ಕನಿಷ್ಠ 24 ಸರಕು ರೈಲುಗಳು ಸಂಚರಿಸುತ್ತವೆ. ಹಳಿಯಲ್ಲಿನ ನಟ್‌, ಬೋಲ್ಟ್ ಪರೀಕ್ಷಿಸುವುದರ ಜೊತೆಗೆ, ವನ್ಯಜೀವಿಗಳು ಬರದಂತೆ ನೋಡಿಕೊಳ್ಳುತ್ತಾಳೆ.

Trending videos

Back to Top