CONNECT WITH US  

ಶಾಸಕ ಮುಖ್‌ತಾರ್‌ ಅನ್ಸಾರಿ ಪೆರೋಲ್‌ಗೆ ದಿಲ್ಲಿ ಹೈಕೋರ್ಟ್‌ ತಡೆ

ಹೊಸದಿಲ್ಲಿ : ಉತ್ತರ ಪ್ರದೇಶ ಚುನಾವಣಾ ಪ್ರಚಾರ  ಕೈಗೊಳ್ಳಲು ಶಾಸಕ ಮುಖ್‌ತಾರ್‌ ಅನ್ಸಾರಿಗೆ ವಿಚಾರಣಾ ನ್ಯಾಯಾಲಯವು ಮಂಜೂರು ಮಾಡಿದ್ದ ಪೆರೋಲ್‌ಗೆ ದಿಲ್ಲಿ ಹೈಕೋಟ್‌ ತಡೆ ನೀಡಿದೆ.

ಅನ್ಸಾರಿ ಅವರು 2005ರಲ್ಲಿ ನಡೆದಿದ್ದ  ಬಿಜೆಪಿ ಶಾಸಕ ಕೃಷ್ಣಾನಂದ ರಾಯ್‌ ಅವರ ಕೊಲೆ ಪ್ರಕರಣದ ಆರೋಪಿಯಾಗಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಶಾಸಕ ಅನ್ಸಾರಿಗೆ ನೀಡಲಾಗಿದ್ದ ಪೆರೋಲ್‌ ಅನ್ನು ರದ್ದುಪಡಿಸುವಂತೆ ಚುನಾವಣಾ ಆಯೋಗ ಮಾಡಿಕೊಂಡಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟಿನ ಜಸ್ಟಿಸ್‌ ಮುಕ್ತಾ ಗುಪ್ತಾ ಅವರು ಪುರಸ್ಕರಿಸಿ, ಪೆರೋಲ್‌ ರದ್ದು ಪಡಿಸಿದರು.

ಈಚೆಗಷ್ಟೇ ಬಹುಜನ ಸಮಾಜ ಪಕ್ಷವನ್ನು ಸೇರಿಕೊಂಡಿದ್ದ  ಶಾಸಕ ಅನ್ಸಾರಿ ಅವರು ಉತ್ತರ ಪ್ರದೇಶದ ಮೌ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು , ಚುನಾವಣಾ ಪ್ರಚಾರ ಕೈಗೊಳ್ಳುವುದಕ್ಕಾಗಿ ಅವರಿಗೆ ವಿಚಾರಣಾ ನ್ಯಾಯಾಲಯವು ಮಾರ್ಚ್‌ 4ರ ವರೆಗಿನ ಅವಧಿಗೆ ಪೆರೋಲ್‌ ಮಂಜೂರು ಮಾಡಿತ್ತು. 

Trending videos

Back to Top