ಸಿಎಂ ಆಯ್ಕೆಯಲ್ಲಿ ಪಾತ್ರವಿಲ್ಲ: ಆರೆಸ್ಸೆಸ್
Team Udayavani, Mar 20, 2017, 10:15 AM IST
ಸಿಎಂ ಆಯ್ಕೆ ಮಾಡುವುದು ರಾಜಕೀಯ ವಿಚಾರ. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಆರೆಸ್ಸೆಸ್ ಸ್ಪಷ್ಟಪಡಿಸಿದೆ. ಯೋಗಿ ಆಯ್ಕೆ ಕುರಿತ ಪ್ರಶ್ನೆಗೆ ರವಿವಾರ ಕೊಯಮತ್ತೂರಿನಲ್ಲಿ ಉತ್ತರಿಸಿದ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಭಾಗಯ್ಯ, ‘ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಸಿಎಂ ಆಯ್ಕೆಯಲ್ಲಿ ನಮ್ಮ ಪಾತ್ರವಿದೆ ಎಂಬುದು ಸುಳ್ಳು. ಅದಕ್ಕೂ ನಮಗೂ ಸಂಬಂಧವಿಲ್ಲ’ ಎಂದಿದ್ದಾರೆ.