CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮುಸ್ಲಿಂ ಧರ್ಮ ಗುರುಗಳ ಸ್ವದೇಶಾಗಮನ

ಹೊಸದಿಲ್ಲಿ: ಪಾಕಿಸ್ಥಾನದಲ್ಲಿ ನಾಪತ್ತೆಯಾಗಿದ್ದರು ಎಂದು ಹೇಳಲಾಗಿರುವ ಹೊಸದಿಲ್ಲಿಯ ಹಜರತ್‌ ನಿಜಾಮುದ್ದೀನ್‌ ದರ್ಗಾದ ಮುಖ್ಯ ಧರ್ಮಗುರು ಸಯ್ಯದ್‌ ಆಸಿಫ್ ನಿಜಾಮಿ ಮತ್ತು ಅವರ ಸಂಬಂಧಿ ಸೋಮವಾರ ಸ್ವದೇಶಕ್ಕೆ ಆಗಮಿಸಿದ್ದಾರೆ. ಅವರಿಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿಯಾಗಿ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಅವರಿಬ್ಬರು ನಾಪತ್ತೆಯಾಗಿದ್ದರು ಎಂಬ ವಿಚಾರ ಇನ್ನೂ ಬಹಿರಂಗವಾಗಿಲ್ಲ. ನಿಜಾಮಿ ಪುತ್ರ ಆಸಿಫ್ ನಿಜಾಮಿ ಕರಾಚಿಯ ಪತ್ರಿಕೆಯೊಂದು ತಂದೆ ಹಾಗೂ ಅವರ ಸಂಬಂಧಿಯನ್ನು ಭಾರತದ ರಾ ಏಜೆಂಟ್‌ ಎಂದು ಆರೋಪಿಸಿ ವರದಿ ಪ್ರಕಟಿಸಿತ್ತು ಎಂದು ದೂರಿದ್ದಾರೆ. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅವರಿಬ್ಬರನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ನಡುವೆ ಬಿಜೆಪಿ ಸಂಸದ ಸುಬ್ರಹ್ಮಣ್ಯನ್‌ ಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದು, ಪಾಕಿಸ್ಥಾನದಲ್ಲಿ ಕಣ್ಮರೆಯಾದ ಇಬ್ಬರೂ ದೇಶದ್ರೋಹ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಅಲ್ಲಿಗೆ ತೆರಳಿದ್ದ ಉದ್ದೇಶ ಅದಾಗಿತ್ತು. ಅಷ್ಟು ಬೇಗ ಅವರನ್ನು ನಂಬಲು ಸಾಧ್ಯವೇ ಇಲ್ಲ. ಈ ಬಗ್ಗೆ ನನಗೆ ಇರುವ ಮಾಹಿತಿ ಪ್ರಕಾರ ದೇಶ ವಿರೋಧಿ ಕೃತ್ಯದಲ್ಲಿ ಪಾಲ್ಗೊಂಡಿದ್ದರು. ಈಗ ಪಾಕ್‌ ಹೆಸರು ಹೇಳಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Back to Top