ಸರಕಾರ ಯೂ ಟರ್ನ್; ಸ್ಟೆಂಟ್ ಬೆಲೆ ಏರಿಕೆ!
Team Udayavani, Apr 1, 2017, 2:04 AM IST
ಹೊಸದಿಲ್ಲಿ: ಹೃದ್ರೋಗಿಗಳಿಗೆ ಅಗತ್ಯವಾದ ಸ್ಟೆಂಟ್ ಬೆಲೆಯನ್ನು ಇಳಿಸಿದ್ದ ಕೇಂದ್ರ ಸರಕಾರ ಇದೀಗ ಮತ್ತೆ ದರ ಪರಿಷ್ಕರಣೆ ಮಾಡಿದೆ. ಔಷಧ ಬೆಲೆ ನಿಯಂತ್ರಿಸುವ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (ಎನ್ಪಿಪಿಎ) ಸ್ಟೆಂಟ್ ಬೆಲೆಗಳನ್ನು ಶೇ.2ರಷ್ಟು ಏರಿಸಿದೆ. ನೂತನ ಬೆಲೆ ಶನಿವಾರದಿಂದ ಜಾರಿಗೆ ಬರಲಿದೆ. ಸಗಟು ದರ ಸೂಚ್ಯಂಕ ಆಧಾರದ ಮೇಲೆ ಈ ಬೆಲೆ ಏರಿಕೆಯನ್ನು ಮಾಡಲಾಗಿದೆ.
ಇದರಿಂದ ಸದ್ಯ ಮೆಟಲ್ ಸ್ಟೆಂಟ್ಗಳ ಬೆಲೆ 7,400 ರೂ. ಆಗಲಿದೆ. ಈ ಮೊದಲು ಇಂತಹ ಸ್ಟೆಂಟ್ಗಳ ಬೆಲೆ 7,260 ರೂ. ಆಗಿತ್ತು. ಇದರೊಂದಿಗೆ ಡ್ರಗ್ ಹೊಂದಿರುವ ಸ್ಟೆಂಟ್ಗಳ ಬೆಲೆ 29,600 ರಿಂದ 30,180 ರೂ.ಗೆ ಏರಿಕೆಯಾಗಿದೆ. ಕಳೆದ ಫೆಬ್ರವರಿಯಲ್ಲಷ್ಟೇ ಸ್ಟೆಂಟ್ಗಳ ಬೆಲೆಯನ್ನು ಎನ್ಪಿಪಿಎ ಇಳಿಕೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು