CONNECT WITH US  

ಚೀನಾಗಾಗಿ ಕತ್ತೆ ಸಾಕಲು ಮುಂದಾದ ಪಾಕ್‌!

ನವದೆಹಲಿ: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಚೀನಾ 321 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗುತ್ತಿದ್ದಂತೆ, ಆ ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಪಾಕಿಸ್ತಾನ, "ಆಪ್ತಮಿತ್ರ'ನಿಗಾಗಿ ಕತ್ತೆ ಸಾಕಲು ಮುಂದಾಗಿದೆ!

ಅಚ್ಚರಿಯಾದರೂ ಇದು ಸತ್ಯ. ಕತ್ತೆಯ ದೇಹದ ಭಾಗಗಳನ್ನು ಬಳಸಿ ರೂಪಿಸುವ ಜಿಲಟಿನ್‌ ಅನ್ನು ಚೀನಾದಲ್ಲಿ ತಯಾರಾಗುವ ಬಹುತೇಕ ಔಷಧಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ ಈ ಜಿಲಟಿನ್‌ಗೆ ಭಾರಿ ಬೇಡಿಕೆ ಹಾಗೂ ಬೆಲೆ ಇದೆ. ಆದರೆ ನಿಗರ್‌ ಹಾಗೂ ಬುರ್ಕಿನಾ ಫ್ಯಾಸೋ ಪ್ರಾಂತ್ಯಗಳಿಂದ ಚೀನಾಗೆ ಪ್ರಾಣಿಗಳ ರಫ್ತು ನಿಷೇಧಿಸಲಾಗಿದೆ.

ಇದರಿಂದ ಚೀನಾದ ಔಷಧ ಉತ್ಪಾದನೆ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಹೀಗಾಗಿ ಕಷ್ಟದಲ್ಲಿರುವ ತನ್ನ ಮಿತ್ರನ ಕೈಹಿಡಿಯಲು ಮುಂದಾಗಿರುವ ಪಾಕಿಸ್ತಾನ ನಿರ್ದಿಷ್ಟ ತಳಿಯ ಕತ್ತೆಗಳ ಸಂತತಿಯನ್ನು ಸಾಕಿ ಬೆಳೆಸಲು ಯೋಜನೆ ರೂಪಿಸಿದೆ. ಬರೋಬ್ಬರಿ 6,427 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಇದಾಗಿದೆ.

ಯೋಜನೆಯಿಂದ ಪಾಕಿಸ್ತಾನದಲ್ಲಿನ ಕತ್ತೆ ಸಾಕುವ ಸಮುದಾಯಗಳಿಗೆ ನೆರವಾಗಲಿದ್ದು, ಎರಡೂ ದೇಶಗಳ ನಡುವಿನ ಬಾಂಧವ್ಯ ಕೂಡ ವೃದ್ಧಿಯಾಗಲಿದೆ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿದೆ.

Trending videos

Back to Top