CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜೈಲಲ್ಲಿರುವ ಎಲ್ಲ ಕೈದಿಗಳಿಗೆ ಸಮಾನ ಆಹಾರ: ಸಿಎಂ ಯೋಗಿ ಆದೇಶ

ಲಕ್ನೋ : ಉತ್ತರ ಪ್ರದೇಶದ ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ, ಅವರು ಬೇಕಿದ್ದರೆ ಸಣ್ಣ ಪುಟ್ಟ ಅಪರಾಧಗಳ ಕೈದಿಗಳೇ ಇರಲಿ ಅಥವಾ ಕ್ರಿಮಿನಲ್‌ ಡಾನ್‌ಗಳೇ ಇರಲಿ - ಅವರೆಲ್ಲರಿಗೂ ಜೈಲಿನಲ್ಲಿ ಒಂದೇ ಬಗೆಯ ಆಹಾರವನ್ನು ಕೊಡತಕ್ಕದ್ದು; ಯಾವುದೇ ತಾರತಮ್ಯ ಎಸಗಕೂಡದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ರಾಜ್ಯದ ಉನ್ನತ ಅಧಿಕಾರಿಗಳಿಗೆ ಅಪ್ಪಣೆ ಕೊಡಿಸಿದ್ದಾರೆ. 

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ನಿನ್ನೆ ಬುಧವಾರ ರಾಜ್ಯದಲ್ಲಿನ ಜೈಲುಗಳು, ಸುಧಾರಣಾ ಕೇಂದ್ರಗಳು ಮತ್ತು ಜಾಗೃತ ಇಲಾಖೆಗಳ ಪರಾಮರ್ಶೆ ಸಭೆಯ ನಡೆಸಿದ್ದ ವೇಳೆ ಈ ಆದೇಶವನ್ನು ಕೊಟ್ಟರು. 

ರಾಜ್ಯದ ಜೈಲುಗಳಲ್ಲಿರುವ ಸಣ್ಣ ಪುಟ್ಟ ಕೈದಿಗಳು, ಡಾನ್‌ಗಳ ನಡುವೆ ಆಹಾರ, ಸೌಕರ್ಯ ಇತ್ಯಾದಿಗಳ ವಿಷಯದಲ್ಲಿ ತಾರತಮ್ಯ ಎಸಗಲಾಗುತ್ತಿದೆ; ಕೆಲವು ದೊಡ್ಡ ಕೈದಿಗಳು, ಮಾಫಿಯಾ ಡಾನ್‌ಗಳು ಜೈಲಿನಲ್ಲಿ ಫೋನ್‌ ಸೌಕರ್ಯ ಹೊಂದಿದ್ದಾರೆ ಎಂಬ ವರದಿಗಳ ಆಧಾರದಲ್ಲಿ ಈ ಆದೇಶ ನೀಡಿದ ಮುಖ್ಯಮಂತ್ರಿ ಯೋಗಿ, ಜೈಲುಗಳಲ್ಲಿ ಮೊಬೈಲ್‌ ಫೋನ್‌ ಜಾಮರ್‌ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  

ಇಂದು ಹೆಚ್ಚು ಓದಿದ್ದು

ಷಷ್ಠಿ ಮಹೋತ್ಸವದ ಅಂಗವಾಗಿ ನೂತನ ಸಭಾ ವೇದಿಕೆಯನ್ನು ಉದ್ಘಾಟಿಸಲಾಯಿತು.

Nov 24, 2017 02:36pm
Back to Top