ಆಧಾರ್‌ ಐಚ್ಛಿಕವಲ್ಲವೇ,ಪ್ಯಾನ್‌ಗೆ ಏಕೆ ಕಡ್ಡಾಯ? ಸುಪ್ರೀಂ

Team Udayavani, Apr 22, 2017, 3:45 AM IST

card-22.jpg

ನವದೆಹಲಿ: ಆಧಾರ್‌ ಐಚ್ಛಿಕವಾಗಿರಬೇಕೇ ಹೊರತು ಅದನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಆದೇಶಿಸಿದ್ದರೂ, ಪ್ಯಾನ್‌ ಕಾರ್ಡ್‌(ಪರ್ಮನೆಂಟ್‌ ಅಕೌಂಟ್‌ ನಂಬರ್‌) ಹೊಂದಲು ಆಧಾರ್‌ ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಪ್ಯಾನ್‌ಗೂ ಆಧಾರ್‌ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾ. ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ಈ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದೆ. ಸಮಾಜ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಆಧಾರ್‌ ಅನ್ನು ಸರ್ಕಾರ ಕಡ್ಡಾಯಗೊಳಿಸುವಂತಿಲ್ಲ ಎಂದು ಮಾ.27ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹಾಗೂ ಬ್ಯಾಂಕ್‌ ಖಾತೆ ತೆರೆಯಲು ಆಧಾರ್‌ ಅನ್ನು ಕಡ್ಡಾಯಗೊಳಿಸಬಹುದು ಎಂದೂ ಹೇಳಿತ್ತು. ಇದನ್ನು ಪ್ರಸ್ತಾಪಿಸಿದ ನ್ಯಾಯಪೀಠ, “ನಮ್ಮ ಆದೇಶದ ಹೊರತಾಗಿಯೂ ಏಕೆ ಆಧಾರ್‌ ಅನ್ನು ಕಡ್ಡಾಯಗೊಳಿಸುತ್ತಿದ್ದೀರಿ,’ ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ದುರ್ಬಳಕೆ ತಡೆಯಲು ಕ್ರಮ: ಪೀಠದ ಪ್ರಶ್ನೆಗೆ ಉತ್ತರಿಸಿದ ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, “ನಕಲಿ ದಾಖಲೆಗಳನ್ನು ನೀಡಿ ಪಡೆದಿರುವ ಪ್ಯಾನ್‌ ಸಂಖ್ಯೆಯ ವಿವರಗಳನ್ನು ನೀಡುವ, ಒಬ್ಬರೇ ಹಲವು ಪ್ಯಾನ್‌ ಸಂಖ್ಯೆಗಳನ್ನು ಹೊಂದಿರುವ, ನಕಲಿ ಕಾರ್ಡ್‌ಗಳ ಮೂಲಕ ಶೆಲ್‌ ಕಂಪನಿಗಳಿಗೆ ಹಣ ವರ್ಗಾಯಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹಾಗಾಗಿ ಆಧಾರ್‌ ಕಡ್ಡಾಯ ಮಾಡಲಾಯಿತು,’ ಎನ್ನುವ ಮೂಲಕ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಇದಕ್ಕೆ ನ್ಯಾಯಪೀಠ, “ಈ ಸಮಸ್ಯೆಗೆ ಪ್ಯಾನ್‌ಗೆ ಆಧಾರ್‌ ಕಡ್ಡಾಯ ಮಾಡುವುದೇ ಪರಿಹಾರವೇ? ನ್ಯಾಯಾಲಯದ ಆದೇಶವಿದ್ದರೂ ನೀವು ಹೇಗೆ ಅದನ್ನು ಕಡ್ಡಾಯಗೊಳಿಸಿದಿರಿ’ ಎಂದು ಖಾರವಾಗಿ ಪ್ರಶ್ನಿಸಿತು. ಜತೆಗೆ, ಮುಂದಿನ ವಿಚಾರಣೆಯನ್ನು ಏ.25ಕ್ಕೆ ಮುಂದೂಡಿತು.

ಆದಾಯ ತೆರಿಗೆ ಕಾಯ್ದೆಯ 139 ಎಎ ಸೆಕ್ಷನ್‌ನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಿಪಿಐ ನಾಯಕ ಬಿನಾಯ್‌ ವಿಶ್ವಂ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಸೆಕ್ಷನ್‌ ಅನ್ವಯ, ಯಾರಲ್ಲಿ ಆಧಾರ್‌ ಕಾರ್ಡ್‌ ಇಲ್ಲವೋ, ಅವರಿಗೆ ಪ್ಯಾನ್‌ ಸಿಗುವುದಿಲ್ಲ. ಹೀಗಾದರೆ, ಆಧಾರ್‌ ಇಲ್ಲದಂತಹ ಜನರಿಗೆ ಬಹಳಷ್ಟು ತೊಂದರೆ ಆಗುತ್ತದೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದರು.

ಟಾಪ್ ನ್ಯೂಸ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

amarnath

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

Ram Ayodhya

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.