CONNECT WITH US  

50 ಪಾಕ್‌ ಸೈನಿಕರ ತಲೆ ತೆಗೆಯಿರಿ : ಹುತಾತ್ಮ ಸೈನಿಕನ ಪುತ್ರಿಯ ಮನವಿ 

ಡಿಯೊರಿಯಾ : ನನ್ನ ತಂದೆಯನ್ನು ಅನಾಗರಿಕವಾಗಿ ಕೊಲೆಗೈದುದಕ್ಕೆ ಪ್ರತಿಕಾರವಾಗಿ 50 ಪಾಕಿಸ್ಥಾನದ ಸೈನಿಕರ ತಲೆ ತೆಗಿಯಬೇಕು ಎಂದು ಹುತಾತ್ಮ ಸೈನಿಕನ ಪುತ್ರಿ ಮನವಿ ಮಾಡಿದ್ದಾಳೆ. 

ಉತ್ತರಪ್ರದೇಶದಲ್ಲಿರುವ ಡಿಯೊರಿಯಾದಲ್ಲಿ ಮಾತನಾಡಿದ ಹುತಾತ್ಮ ಹೆಡ್‌ ಕಾನ್‌ಸ್ಟೆಬಲ್‌ ಪ್ರೇಮ್‌ಸಾಗರ್‌ ಪುತ್ರಿ ಸರೋಜ್‌ 'ನನ್ನ ತಂದೆಯ ತ್ಯಾಗಕ್ಕೆ ಪ್ರತೀಕಾರವಾಗಿ 50 ಪಾಕಿಸ್ಥಾನದ ಸೈನಿಕರನ್ನು ಬಲಿ ಪಡೆಯಬೇಕು' ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕೃಷ್ಣ ಘಾಟಿ ವಲಯದಲ್ಲಿ ಬೆಳಗ್ಗೆ 8.30ರ ವೇಳೆಗೆ ಈ ಸುಮಾರು 250 ಮೀಟರ್‌ನಷ್ಟು ಒಳಕ್ಕೆ ನುಗ್ಗಿದ ಪಾಕಿಸ್ಥಾನದ ಗಡಿ ಕಾರ್ಯಪಡೆ (ಬಿಎಟಿ) ಮೊದಲಿಗೆ ಭಾರತೀಯ ಸೇನೆಯ ಎರಡು ಮುಂಚೂಣಿ ನೆಲೆಗಳ ಮೇಲೆ ರಾಕೆಟ್‌, ಮೋರ್ಟರ್‌ಗಳಿಂದ ಅಪ್ರಚೋದಿತ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಿಎಸ್‌ಎಫ್ ನ ಜೆಸಿಒ ಸುಭೇದಾರ್‌ ಪರಮ್‌ಜೀತ್‌ ಸಿಂಗ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಪ್ರೇಮ್‌ಸಾಗರ್‌ ಹುತಾತ್ಮರಾಗಿದ್ದರು. ಮತ್ತೂಬ್ಬ ಯೋಧ ರಾಜೇಂದ್ರ ಸಿಂಗ್‌ ಗಾಯಗೊಂಡಿದ್ದರು. ಅನಂತರ ಪಾಕ್‌ನ ಸೈನಿಕರು ನಮ್ಮ ಹುತಾತ್ಮ ಯೋಧರ ಶಿರಚ್ಛೇದನ ಮಾಡಿ, ಅಂಗಾಂಗಗಳನ್ನು ಛಿದ್ರಗೊಳಿಸಿ ಅಟ್ಟಹಾಸಗೈದಿದ್ದರು. 

ಭಾರತದ ಪ್ರತಿ ದಾಳಿಗೆ 7 ಪಾಕ್‌ ಸೈನಿಕರು ಬಲಿ 
ದಾಳಿಯ ಬಳಿಕ ಪ್ರತಿದಾಳಿ ನಡೆಸಿರುವ ಭಾರತೀಯ ಸೈನಿಕರು 7 ಮಂದಿ ಪಾಕ್‌ ಸೈನಿಕರನ್ನು ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ. 

Trending videos

Back to Top