ಕುಲ್ಗಾಮ್:ಉಗ್ರರ ಅಟ್ಟಹಾಸ;ಇಬ್ಬರು ಯೋಧರು ಹುತಾತ್ಮ,6 ಮಂದಿ ಗಂಭೀರ
Team Udayavani, Jun 3, 2017, 12:16 PM IST
ಕುಲ್ಗಾಮ್ : ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯಲ್ಲಿರುವ ಕುಲ್ಗಾಮ್ನ ಖ್ವಾಜಿಗುಂದ್ ಬಳಿಯಿರುವ ಸೇನಾ ನೆಲೆಯನ್ನು ಗುರಿಯಾಗಿರಿಸಿಕೊಂಡು ಶುಕ್ರವಾರ ಉಗ್ರರು ದಾಳಿ ನಡೆಸಿದ್ದು ಇಬ್ಬರು ಯೋಧರು ಹುತಾತ್ಮ ರಾಗಿ6 ಮಂದಿ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೇನಾ ನೆಲೆಯನ್ನು ಗುರಿಯಾಗಿರಿಸಿಕೊಂಡು ಉಗ್ರರು ಭಾರೀ ಗುಂಡಿನ ಮಳೆ ಗೆರೆದಿದ್ದಾರೆ. ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಂಭೀರವಾಗಿ ಗಾಯಗೊಂಡಿದ್ದ ಯೋಧರಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಪಡೆಗಳು ಜಮಾವಣೆಗೊಂಡು ಉಗ್ರರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆದ್ದಾರಿಯ ಸಂಚಾರವನ್ನು ಬಂದ್ ಮಾಡಲಾಗಿದೆ.
ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.