CONNECT WITH US  

ಭಾರತೀಯರ‌ ನೇಮಕಕ್ಕೆ ಅಮೆರಿಕ ಕಂಪನಿಗಳು ಸಜ್ಜು

ಬೆಂಗಳೂರು: ಒಂದೆಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಆಡಳಿತ, ವಲಸಿಗರನ್ನು ನಿಯಂತ್ರಿಸಲು ಮತ್ತು ಉದ್ಯೋಗ ಕ್ಷೇತ್ರದಲ್ಲಿ ತನ್ನದೇ ದೇಶದ ಪ್ರತಿಭೆಗಳಿಗೆ ಆದ್ಯತೆ ನೀಡಲು ಹೊಸ ವೀಸಾ ನೀತಿಗಳನ್ನು ಜಾರಿಗೊಳಿಸುತ್ತಿದ್ದರೆ, ಇನ್ನೊಂದೆಡೆ ಅದೇ ದೇಶದ ದಿಗ್ಗಜ ಐಟಿ ಕಂಪನಿಗಳು ಎಂಜಿನಿಯರ್‌ಗಳನ್ನು ಅರಸಿ ಭಾರತದ ಬಾಗಿಲಲ್ಲಿ ಬಂದು ನಿಂತಿವೆ.

ಮೈಕ್ರೋಸಾಫ್ಟ್, ಲಿಂಕ್ಡ್ಇನ್‌, ಒರಾಕಲ್‌, ಫೇಸ್‌ಬುಕ್‌ ಮತ್ತು ಗೂಗಲ್‌ ರೀತಿಯ ಅಮೆರಿಕ ಮೂಲದ ಬೃಹತ್‌ ಸಂಸ್ಥೆಗಳು, ಭಾರತದಲ್ಲಿ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದ್ದು, ಈ ಮೂಲಕ ಅಮೆರಿಕ ಅಧ್ಯಕ್ಷರ ನಿಲುವಿಗೆ ವಿರುದ್ಧವಾಗಿ ಹೆಜ್ಜೆ ಇರಿಸಿವೆ. ಅಲ್ಲದೆ, ಭಾರತದ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಗಳೊಂದಿಗೆ ಪರೋಕ್ಷ ವಾಗಿ "ಪ್ರತಿಭಾ ಯುದ್ಧ' ನಡೆಸಲು ಮುಂದಾಗಿವೆ. ಫೇಸ್‌ಬುಕ್‌, ಲಿಂಕಿನ್‌ ಮತ್ತು ಇತರ ಕಂಪನಿಗಳು ಭಾರತದಲ್ಲಿ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಈಗಿರುವುದಕ್ಕಿಂತ 2 ಪಟ್ಟು ಹೆಚ್ಚಿಸುವ ಇರಾದೆ ಹೊಂದಿವೆ. ಯಾಂತ್ರಿಕ ಕಲಿಕೆ, ಡಾಟಾ ವಿಶ್ಲೇಷಣೆ, ನೆಟÌರ್ಕಿಂಗ್‌ ಕ್ಷೇತ್ರಗಳಿಗೆ ಭಾರತದ ಎಂಜಿನಿಯ ರ್‌ಗಳ ನೇಮಿಸಿಕೊಳ್ಳಲು ಕಂಪನಿಗಳು ಮುಂದಾಗಿವೆ.

Trending videos

Back to Top