CONNECT WITH US  

ಪಾಕ್‌ನಲ್ಲಿ ರಂಜಾನ್‌ ವೇಳೆ ಘೋರ ದುರಂತ: ಪೆಟ್ರೋಲ್‌ ಆಸೆಗೆ 140 ಬಲಿ

ಬಹಾವಲ್‌ಪುರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಬಹವಲ್‌ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಘೋರ ದುರಂತ ಸಂಭವಿಸಿದ್ದು, ತೈಲ ಟ್ಯಾಂಕರ್‌ ಹೊತ್ತಿ ಉರಿದ ಪರಿಣಾಮ 140 ಮಂದಿ ಸಜೀವ ದಹನಗೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಪಲ್ಟಿಯಾದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದ್ದ ಅಪಾರ ಪ್ರಮಾಣದ ಪೆಟ್ರೋಲ್‌ ಒಟ್ಟುಗೂಡಿಸಲು ಜನರು ಮುಗಿಬಿದ್ದ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ. 

ಹಲವರು ಗಾಯಗೊಂಡಿದ್ದು ಅವರನ್ನು ಬಹವಲ್‌ಪುರದ ವಿಕ್ಟೊರೀಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 123 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ 17 ಜನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. 

ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಹಲವರ ದೇಹಗಳು ಗುರುತು ಪತ್ತೆಯಾಗದಷ್ಟು ಸುಟ್ಟು ಕರಕಲಾಗಿರುವುದು ಭೀಕರತೆಯನ್ನು ಸಾರಿ ಹೇಳುತ್ತಿದೆ.

Trending videos

Back to Top