CONNECT WITH US  

ಎನ್ನಾರೈಗಳಿಗೂ ಮತದಾನ ಅವಕಾಶ: ಪ್ರತಿಕ್ರಿಯೆ ನೀಡಿ

ಹೊಸದಿಲ್ಲಿ: ಅನಿವಾಸಿ ಭಾರತೀಯರಿಗೆ ಅವರು ಇರುವಲ್ಲಿಂದಲೇ ಮತದಾನ ಅವಕಾಶ ನೀಡುವ ಕುರಿತಂತೆ, ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಇದೇ ವೇಳೆ, ಅನಿವಾಸಿ ಭಾರತೀಯರಿಗೂ ಅಲ್ಲಿಯೇ ಮತದಾನ ಹಕ್ಕು ನೀಡುವ ಬಗ್ಗೆ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗದ ಪ್ರಸ್ತಾವನೆಯನ್ನೂ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್‌ ಮತ್ತು ನ್ಯಾ| ಡಿ.ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಪರಿಗಣಿಸಿದೆ.

ಪ್ರಜಾಪ್ರಾತಿನಿಧ್ಯ ಕಾಯ್ದೆ 1950ನ್ನು ಬದಲಾವಣೆ ಮಾಡಿ ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ ಮೂಲಕ ಮತದಾನ ಅವಕಾಶ ನೀಡಬಹುದಾಗಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿತ್ತು. ಅನಿವಾಸಿ ಭಾರತೀಯರಿಗೆ ಮತದಾನ ಅವಕಾಶ ಕಲ್ಪಿಸುವ ಬಗ್ಗೆ ಹಲವು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಕೇಂದ್ರಕ್ಕೆ ಪ್ರತಿಕ್ರಿಯೆ ಕೇಳಿದೆ. ಅಂಚೆ ಮತ ಪತ್ರದ ಮೂಲಕ ಎನ್ನಾರೈಗಳಿಗೂ ಹಕ್ಕು ಚಲಾಯಿಸುವ ಅವಕಾಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Trending videos

Back to Top