CONNECT WITH US  

ಸಿರಿಯಾಗಿಂತ ಭಾರತದಲ್ಲೇ ಉಗ್ರ ದಾಳಿ ಹೆಚ್ಚು: ಅಮೆರಿಕ

ನವದೆಹಲಿ: 2016ರಲ್ಲಿ ಭಾರತ ಅತಿ ಹೆಚ್ಚು ಬಾರಿ ಉಗ್ರರ ದಾಳಿಯನ್ನು ಎದುರಿಸಿದ್ದು, ಸಿರಿಯಾದ ಮೇಲೆ ಆಗಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಉಗ್ರ ದಾಳಿಗಳು ಭಾರತದ ಮೇಲಾಗಿವೆ ಎಂದು ಅಮೆರಿಕ ಹೇಳಿದೆ. 2016ರಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ಮೇಲೆ ನಡೆದಿರುವ ದಾಳಿ ಕುರಿತ ತನ್ನ ಅಧ್ಯಯನ ವರದಿ ಪ್ರಕಟಿಸಿರುವ ಅಮೆರಿಕದ ವಿದೇಶಾಂಗ ಇಲಾಖೆ, ಭಾರತದಲ್ಲಿ ಉಗ್ರರ ಹಾವಳಿ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ.

ಜಗತ್ತಿನಾದ್ಯಂತ ನಡೆವ ಉಗ್ರರ ದಾಳಿ ಪ್ರಮಾಣದಲ್ಲಿ ಶೇ.9, ಸಾವಿನ ಪ್ರಮಾಣದಲ್ಲಿ ಶೇ.13 ಇಳಿಕೆಯಾಗಿರುವ ಸಮಯದಲ್ಲೇ ಭಾರತ ಉಗ್ರರಿಂದ ಹೆಚ್ಚು ಅಪಾಯ ಎದುರಿಸುತ್ತಿದೆ. 2016ರಲ್ಲಿ ಭಾರತದಲ್ಲಿ ಉಗ್ರ ದಾಳಿಗಳ ಪ್ರಮಾಣ ಶೇ.16ರಷ್ಟು ವೃದ್ಧಿಸಿದ್ದು, ಸಾವಿನ ಸಂಖ್ಯೆಯಲ್ಲೂ ಶೇ.17ರ ಹೆಚ್ಚಳವಾಗಿದೆ. ವರದಿಯಲ್ಲಿ ಹೆಚ್ಚು ಉಗ್ರ ದಾಳಿಗೆ ಒಳಗಾದ ದೇಶಗಳ ಪಟ್ಟಿ ಮಾಡಿದ್ದು, ಇರಾಕ್‌, ಅಫ್ಘಾನಿಸ್ತಾನ ಮೊದಲ ಮತ್ತು 2ನೇ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ.

Trending videos

Back to Top