CONNECT WITH US  

ಅಮರನಾಥ ಯಾತ್ರಿಕರ ಮೇಲೆ ದಾಳಿ ಗೈದಿದ್ದ 3 ಎಲ್‌ಇಟಿ ಉಗ್ರರ ಬಂಧನ 

ಶ್ರೀನಗರ: ಮಹತ್ವದ ಕಾರ್ಯಾಚರಣೆಯಲ್ಲಿ ಅನಂತ್‌ನಾಗ್‌ ನಲ್ಲಿ ಜುಲೈ 10 ರಂದು ಅಮರನಾಥ ಯಾತ್ರಿಕರ ಮೇಲೆ ಭೀಕರ ದಾಳಿ ನಡೆಸಿದ ಮೂವರು ಉಗ್ರರನ್ನು ಬಂಧಿಸಲಾಗಿದೆ. 

ಕಾಶ್ಮೀರದ ಡಿಜಿಪಿ ಮುನೀರ್‌ ಖಾನ್‌ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ  ಮೂವರು ಉಗ್ರರನ್ನು ಬಂಧಿಸಿರುವ ಕುರಿತು ಮಾಹಿತಿ ನೀಡಿದರು. ದಾಳಿಯನ್ನು ಲಷ್ಕರ್‌-ಇ-ತೋಯ್ಬಾ ಉಗ್ರರು ನಡೆಸಿದ್ದು, ಬಂಧಿತರ ಪೈಕಿ ಓರ್ವ ಉಗ್ರ ಪಾಕಿಸ್ತಾನದವನಾಗಿದ್ದು, ಇನ್ನಿಬ್ಬರು ಕಾಶ್ಮೀರದವರು ಎಂದು ಮಾಹಿತಿ ನೀಡಿದ್ದಾರೆ.

ಬಂಧಿತರ ವಿಚಾರಣೆ ವೇಳೆ ದಾಳಿಗೆ ಪಾಕ್‌ ಉಗ್ರ ಸಂಘಟನೆ  ಪ್ರೇರಣೆ ನೀಡಿರುವುದು ಕಂಡು ಬಂದಿದೆ. ದಾಳಿಯಲ್ಲಿ ಭಾಗಿಯಾದ ಇನ್ನಿಬ್ಬರು ಉಗ್ರರನ್ನು ಸೇನಾ ಪಡೆಗಳು ಈಗಾಗಲೇ ಹತ್ಯೆಗೈದಿವೆ.

ಉಗ್ರರು ಯಾತ್ರಿಕರ ಬಸ್‌ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿ, 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 

Trending videos

Back to Top