ಮೋದಿಗೆ ಮಾತನಾಡಲು ಏನೂ ಇಲ್ಲ; ಭಾಷಣ ಚುಟುಕಾಗ್ತಿದೆ: ರಾಹುಲ್
Team Udayavani, Aug 16, 2017, 5:46 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲು ಹೊಸ ವಿಷಯವೇನೂ ಇಲ್ಲದಿರುವುದರಿಂದ ಅವರು ಈ ಬಾರಿ ದಿಲ್ಲಿಯ ಕೆಂಪು ಕೋಟೆಯ ಮೇಲಿಂದ ಸ್ವಾತಂತ್ರ್ಯ ದಿನದಂದು ಮಾಡಿರುವ ಭಾಷಣವು ಅವರ ಈ ವರೆಗಿನ ಭಾಷಣದಲ್ಲೇ ಕಡಿಮೆ ಅವಧಿಯದ್ದಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೆಂಪು ಕೋಟೆಯ ಮೇಲಿಂದ ಮೋದಿ ಮಾಡಿರುವ ಭಾಷಣಗಳಲ್ಲಿ ಈ ಬಾರಿಯ ಭಾಷಣ ಅತ್ಯಂತ ಕಿರಿದಾಗಿತ್ತು ಎಂಬುದನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನನಗೆ ತಿಳಿಸಿದರು ಎಂದು ರಾಹುಲ್ ಹೇಳಿದರು.
ಸ್ವಾತಂತ್ರ್ಯ ದಿನದಂದು ಮೋದಿ ಈ ಬಾರಿ ಕೆಂಪು ಕೋಟೆಯ ಮೇಲಿಂದ ಮಾಡಿದ ಭಾಷಣವು ಕೇವಲ 56 ನಿಮಿಷದ್ದಾಗಿತ್ತು. ಈ ವರೆಗೆ ಪ್ರಧಾನಿಯಾಗಿ ಅವರು ಇಲ್ಲಿಂದ ಮಾಡಿರುವ ನಾಲ್ಕು ಭಾಷಣಗಳ ಪೈಕಿ ಈ ಬಾರಿಯದ್ದು ಕಿರು ಅವಧಿಯದ್ದಾಗಿತ್ತು.
ಎನ್ಡಿಎ ಸರಕಾರದ ಆರೋಗ್ಯ ನೀತಿಗಳ ಫಲವಾಗಿ ಉತ್ತರ ಪ್ರದೇಶದ ಗೋರಖ್ಪುರದಲ್ಲಿ 90 ಶಿಶುಗಳು ಮೃತಪಟ್ಟದನ್ನು ಮೋದಿ ತನ್ನ ಭಾಷಣದಲ್ಲಿ ಜನರಿಗೆ ಹೇಳೇ ಇಲ್ಲ. ಕೆಲ ಸಮಯದ ಹಿಂದೆ ನಾನು ಗೋರಖ್ಪುರದಲ್ಲಿದ್ದೆ. ಆಗ ಅಲ್ಲಿನ ಆಸ್ಪತ್ರೆಗಳ ದುಃಸ್ಥಿತಿಯನ್ನು ಕಂಡು ಅದನ್ನು ಸುಧಾರಿಸುವಂತೆ ಮೋದಿ ಜೀ ಅವರನ್ನು ಕೇಳಿಕೊಂಡಿದ್ದೆ. ಆದರೆ ಅದಕ್ಕೆ ಅವರು ಸ್ಪಂದಿಸಲೇ ಇಲ್ಲ ಎಂದು ರಾಹುಲ್ ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ