ಕೇರಳ ಆರೆಸ್ಸೆಸ್ ಸದಸ್ಯರ ಸಂಖ್ಯೆ 9 ಲಕ್ಷಕ್ಕೇರಿಕೆ ಗುರಿ
Team Udayavani, Aug 21, 2017, 8:25 AM IST
ಹೊಸದಿಲ್ಲಿ: ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕಾರ್ಯಕರ್ತರ ವಿರುದ್ಧ ವ್ಯಾಪಕ ಹಿಂಸಾಕೃತ್ಯಗಳು ನಡೆಯುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, 2019ರ ವೇಳೆಗೆ ತನ್ನ ಕಾರ್ಯಕರ್ತರ ಸಂಖ್ಯೆಯನ್ನು 9 ಲಕ್ಷಕ್ಕೇರಿಸುವುದಾಗಿ ಆರೆಸ್ಸೆಸ್ ಹೇಳಿಕೊಂಡಿದೆ.
ಆರೆಸ್ಸೆಸ್‌ನ ಹಿರಿಯ ನಾಯಕ ಜೆ. ನಂದಕುಮಾರ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು,” ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ದಾಳಿಗಳು ಹೆಚ್ಚುತ್ತಿದ್ದರೂ ಕೇರಳದಲ್ಲಿ ಸಮಾಜದ ಸಮಗ್ರ ಏಳ್ಗೆಗಾಗಿ ಆರೆಸ್ಸೆಸ್ ಯತ್ನಿಸಲಿದೆ’ ಎಂದಿದ್ದಾರೆ. “ದಾಳಿಗಳು ನಮ್ಮನ್ನು ಮತ್ತಷ್ಟು ಬಲಪಡಿಸಿದ್ದು, ರಾಷ್ಟ್ರ ಮತ್ತು ಸಮಾಜದ ಮೇಲಿಟ್ಟಿರುವ ಬದ್ಧತೆಯನ್ನು ಇನ್ನೂ ಹೆಚ್ಚು ಮಾಡಿದೆ. ನಾವೀಗ ಇನ್ನಷ್ಟು ಪರಿಣಾಮಕಾರಿಯಾಗಿ ನಮ್ಮ ಕೆಲಸ ಮಾಡಲಿದ್ದೇವೆ’ ಎಂದಿದ್ದಾರೆ. “ಈಗಾಗಲೇ ರಾಜ್ಯಾದ್ಯಂತ 5 ಸಾವಿರ ಶಾಖೆಗಳಿದ್ದು, ಇದರ ಸಂಖ್ಯೆ ಹೆಚ್ಚುತ್ತಿದೆ. 2019ರಲ್ಲಿ 9 ಲಕ್ಷ ಕಾರ್ಯಕರ್ತರು ಸೇರಿಕೊಳ್ಳಲಿ ದ್ದಾರೆ ಎಡ ಪಕ್ಷ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದ್ದು, ಮತ್ತಷ್ಟು ಮಂದಿ ಆರೆಸ್ಸೆಸ್ ಸೇರಿಕೊಳ್ಳುತ್ತಿದ್ದಾರೆ. ಯುವಕರಲ್ಲಿ ರಾಷ್ಟ್ರೀಯತೆ ಬಗ್ಗೆ ಒಲವು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ