CONNECT WITH US  

ಬಯಲು ಶೌಚ ಎಸಗಿದ ಮಧ್ಯಪ್ರದೇಶ ಸರಕಾರಿ ಶಿಕ್ಷಕ ಅಮಾನತು

ಭೋಪಾಲ್‌ : ತೆರೆದ ಬಯಲಲ್ಲೇ ಮಲ ವಿಸರ್ಜಿಸಿದ ಸರಕಾರಿ ಶಾಲೆಯ ಶಿಕ್ಷಕನೋರ್ವನನ್ನು  ಮಧ್ಯ ಪ್ರದೇಶ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ. 

ಮಧ್ಯಪ್ರದೇಶದ ಅಶೋಕ್‌ನಗರ ಜಿಲ್ಲೆಯ ಶಿಕ್ಷಣಾಧಿಕಾರಿ, ಬಯಲು ಶೌಚ ನಡೆಸಿದ ಸರಕಾರಿ ಶಾಲಾ ಶಿಕ್ಷಕನ ಈ ಕೃತ್ಯವು ದುರ್ನಡತೆಯಾಗಿದೆಯಲ್ಲದೆ ಸರಕಾರಿ ಮಾರ್ಗದರ್ಶಿ ಸೂತ್ರಗಳ ನೇರ ಉಲ್ಲಂಘನೆಯಾಗಿರುವುದರಿಂದ ಆತನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿ ಶಿಕ್ಷಕನನ್ನು ಅಶೋಕನಗರ ಜಿಲ್ಲೆಯ ಬುಡೇರಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆರೋಪಿ ಶಿಕ್ಷಕನಿಂದ ಸರಕಾರದ ಸ್ವಚ್ಚ ಭಾರತ ಅಭಿಯಾನದ ಉಲ್ಲಂಘನೆಯಾಗಿದೆ ಎಂದವರು ಹೇಳಿದರು. 

ಈ ವರ್ಷ ಜೂನ್‌ ತಿಂಗಳಲ್ಲಿ ಮಧ್ಯ ಪ್ರದೇಶದ ರೈಸೇನ್‌ ಜಿಲ್ಲೆಯ ವೀರ್‌ಪುರ್‌ ಗ್ರಾಮದ 13 ಕುಟುಂಬಗಳು ಬಯಲು ಶೌಚ ನಡೆಸಿದ ಅಪರಾಧಕ್ಕಾಗಿ ಸುಮಾರು ನಾಲ್ಕು ಲಕ್ಷ ರೂ. ದಂಡವನ್ನು ಪಂಚಾಯತ್‌ ಅಧಿಕಾರಿಗಳು ವಿಧಿಸಿದ್ದರು. 


Trending videos

Back to Top